ಅಪಹರಣವಾಗಿದ್ದ ನಾಲ್ಕು ವರ್ಷದ ಬಾಲಕ ಮರಳಿ ಗೂಡಿಗೆ
ಪುಣೆ: ಕಳೆದ ವಾರ ಬಾಳೆವಾಡಿಯಿಂದ ಅಪಹರಣಕ್ಕೊಳಗಾಗಿದ್ದ ನಾಲ್ಕು ವರ್ಷದ ಬಾಲಕ ಬುಧವಾರ ಪುನಾವಾಲೆ ಪ್ರದೇಶದಲ್ಲಿ ಸಿಕ್ಕಿದ್ದಾನೆ. ಕೂಡಲೇ ಬಾಲಕನನ್ನು ಆತನ ಪೋಷಕರ ಮಡಿಲಿಗೆ ಸೇರಿಸಿದ್ದಾರೆ. ವೈದ್ಯ ದಂಪತಿ ಸತೀಶ್ ಮತ್ತು ಪ್ರಾಚಿ ಚವ್ಹಾಣ್ ಅವರ ಪುತ್ರ ಈ ಸ್ವರ್ಣವ್ ಅಲಿಯಾಸ್ ದುಗ್ಗು. ಬಾಲಕನನ್ನು ಅಪಹರಿಸಿದ್ದ ಕಿರಾತಕ ವ್ಯಕ್ತಿ ದುಗ್ಗುನನ್ನು ಬುಧವಾರ ಪುನಾವಾಲೆಯ ಕಟ್ಟಡದಲ್ಲಿ ಬಿಟ್ಟು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜನವರಿ 11 ರಂದು ಬೆಳಿಗ್ಗೆ 9.45 ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದು ಸ್ವರ್ಣವ್ ಅವರನ್ನು ಬಾಳೆವಾಡಿ ಪ್ರದೇಶದ ಸಾಯಕರ್ ತೋಟದಿಂದ ಅಪಹರಿಸಿದ್ದರು. ಕಿಡ್ನಾಪ್ ನಡೆದ ಸ್ಥಳವು ಬಾಳೆವಾಡಿ ಪೊಲೀಸ್ ಚೌಕಿಯ ಸಮೀಪದಲ್ಲಿದ್ರಿಂದ ವೈದ್ಯ ದಂಪತಿ ಕೂಡಲೇ ಕೇಸ್ ದಾಖಲು ಮಾಡಿದ್ರು.
ಬಾಲಕ ಮತ್ತು ಅಪಹರಣಕಾರರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ರು. ಕ್ರೈಂ ಬ್ರಾಂಚ್‌ನ ಸ್ಕ್ವಾಡ್‌ಗಳ ಜೊತೆಗೆ ಪುಣೆಯ ಸುಮಾರು 20 ಪೊಲೀಸ್ ಠಾಣೆಗಳ 350 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ 30-35 ಕಿಮೀ ವ್ಯಾಪ್ತಿಯೊಳಗೆ ಆ ನಂಬರ್ ಪ್ಲೇಟ್ ಇರುವ ಬೈಕ್‌ಗಳನ್ನು ಪರಿಶಿಲನೆ ನಡೆಸಲಾಗಿದೆ. ಜೊತೆಗೆ ಕುಟುಂಬದೊಂದಿಗೆ ಸಂಪರ್ಕವಿರುವ ಎಲ್ಲಾ ಬಂಧು ಮಿತ್ರರ ವಿಚಾರಣೆ ಕೂಡ ನಡೆಸಲಾಗಿತ್ತು. ಜೊತೆಗೆ ಹುಡುಗ ಮತ್ತು ಅವನ ಕುಟುಂಬ ಸದಸ್ಯರ ದೈನಂದಿನ ದಿನಚರಿಯನ್ನು ಪರಿಶೀಲಿಸಿದ್ದೇವೆ. ಇದಕ್ಕೂ ಮುಂಚೆ ಅಪಹರಣ ಕಾರ್ಯಗಳಲ್ಲಿ ತೊಡಗಿದ್ದ ರೌಡಿ ಶೀಟರ್‌ಗಳ ವಿಚಾರಣೆ ಕೂಡ ಮಾಡಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ರಾಮನಾಥ್ ಪೋಕಳೆ ಹೇಳಿದರು.
ಈ ನಡುವೆ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ವ್ಯಕ್ತಿಯೊಬ್ಬ ಪುನಾವಾಲೆ ಪ್ರದೇಶದ ಕಟ್ಟಡವೊಂದಕ್ಕೆ ಬಂದು ನನಗೆ ಸ್ವಲ್ಪ ಕೆಲಸವಿದೆ. ಅಲ್ಲಿವರೆಗೂ ಬಾಲಕನನ್ನು ನೋಡಿಕೊಳ್ಳುತ್ತೀರಾ ಎಂದು ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಮತ್ತು ಕೆಲಸ ಮಾಡ್ತಿದ್ದವರಿಗೆ ಹೇಲಿ ಅಲ್ಲಿಂದ ಹೊರಟು ಹೋಗಿದ್ದಾನೆ. ಎಷ್ಟು ಹೊತ್ತಾದರೂ ಆ ವ್ಯಕ್ತಿ ವಾಪಸ್ ಬರಲಿಲ್ಲ. ಬಾಲಕಿ ಅಳಲು ಶುರು ಮಾಡಿದ್ದರಿಂದ ಸ್ಥಳೀಯರು ಸಮಾಧಾನ ಮಾಡಿ ಬಾಲಕನ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ವೈದ್ಯ ದಂಪತಿಯ ಫೋನ್ ನಂಬರ್ ಹಾಗೂ ಮನೆ ಅಡ್ರಸ್ ದೊರೆತಿದೆ. ಕೂಡಲೇ ಅವರಿಗೆ ಕರೆ ಮಾಡಿ ಎಲ್ಲ ವಿಚಾರವನ್ನು ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಹೋಗಿ ಬಾಲಕನನ್ನು ಕರೆತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಅಪಹರಣಕಾರರನ್ನು ಹಿಡಿಯಲು ಎಲ್ಲಾ ಪ್ರಯತ್ನಗಳು ನಡೆದಿವೆ ಆದಷ್ಟು ಶೀಘ್ರದಲ್ಲಿ ಕಿಡ್ಯ್ನಾಪರ್ ಬಲೆಗೆ ಬೀಳುತ್ತಾನೆ ಎಂದು ಡಿಸಿಪಿ ಪವಾರ್ ತಿಳಿಸಿದ್ದಾರೆ. ಇತ್ತ ತಮ್ಮ ಮಗ ಮನೆಗೆ ಬಂದಿದ್ದಕ್ಕೆ ವೈದ್ಯ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಮಗ ಕಾಣೆಯಾಗಿದ್ದಕ್ಕೆ ಚೌಹಾಣ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಾಕಿದ್ರು.