CinemaNational

ಒಡಿಸ್ಸಾ ಕರಾವಳಿಯಲ್ಲಿ ಅರಳಿದ ʻಲೈಗರ್ʼ ಮಣ್ಣಿನ ಕಲಾಕೃತಿ

ಒಡಿಸ್ಸಾ: ವಿಜಯ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ ‘ಲೈಗರ್’ ಸದ್ಯದಲ್ಲೇ ತೆರೆಗೆ ಬರಲಿದೆ.  ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ. ಇದರಲ್ಲಿ ವಿಶ್ವವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದು, ಈ ಚಿತ್ರದ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಬಿಡುಗಡೆ ದಿನಾಂಕವನ್ನು ಕೂಡ ಈಗಾಗಲೇ ಘೋಷಣೆ ಮಾಡಲಾಗಿದ್ದು, ಈ ಚಿತ್ರವು ಆಗಸ್ಟ್ 25, 2022 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ವಿಜಯ್ ದೇವರಕೊಂಡ ಟಾಲಿವುಡ್‌ ಸೇರಿದಂತೆ ಇತರ ಭಾಷೆಗಳಲ್ಲೂ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದರ ಜೊತೆಗೆ ಈಗ ಟ್ರೆಂಡಿಂಗ್‌ನಲ್ಲಿ ಇರುವುದು ಇತ್ತಿಚೆಗಷ್ಟೇ ಒಡಿಸ್ಸಾ ಕಡಲ ತೀರದಲ್ಲಿ ಅರಳಿದ್ದ ಲೈಗರ್‌ ಸಿನಿಮಾದ ಪೋಸ್ಟರ್.‌ ಹೌದು ಕಡಲತೀರದಲ್ಲಿ ಶಿಲ್ಪಿ ದಶರತ್ ಮೊಹಾಂತ ಎಂಬುವವರು  ‘ಲೈಗರ್’ ಚಿತ್ರದ ಪೋಸ್ಟರ್ ಕೆತ್ತಿದ್ದರು. ವಿಜಯ್ ದೇವರಕೊಂಡ ಮತ್ತು ಮೈಕ್ ಟೈಸನ್ ಅವರ ಅರ್ಧರ್ಧ ಮುಖ ಹಾಗೂ ‘ಲೈಗರ್’ ಶೀರ್ಷಿಕೆ ಮತ್ತು ‘ಸಾಲಾ ಕ್ರಾಸ್ ಬೀಡ್’ ಎಂಬ ಅಡಿಬರಹವನ್ನು ಶಿಲ್ಪದಲ್ಲಿ ತೋರಿಸಿದ್ದಾರೆ. ಇದೀಗ ಈ ‘ಲೈಗರ್’ ಮನೋಜ್ಞ ಶಿಲ್ಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಜಯ್ ಅಭಿಮಾನಿಗಳು ಶಿಲ್ಪ ಕಲಾಕೃತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Share Post