CrimeNational

ಮಹಿಳೆಯ ಮನೆಯ ಟ್ರಂಕ್‌ನಲ್ಲಿ ಸಿಕ್ಕಿಬಿದ್ದ ಪ್ರಿಯತಮ; ಬಿತ್ತು ನೋಡಿ ಗೂಸಾ!

ಲಖನೌ; ವಿವಾಹಿತ ಮಹಿಳೆಯ ಮನೆಗೆ ಬಂದಿದ್ದ ಆಕೆಯ ಪ್ರಿಯಕರ, ಮಹಿಳೆಯ ಸಂಬಂಧಿಕರು ದಿಢೀರ್‌ ಅಂತ ಎಂಟ್ರಿ ಕೊಟ್ಟಿದ್ದು ನೋಡಿ ಟ್ರಂಕ್‌ ಒಂದರಲ್ಲಿ ಬಚ್ಚಿಟ್ಟುಕೊಂಡಿದ್ದ.. ಆದ್ರೆ ಮನೆಯವರಿಗೆ ಆತ ಸಿಕ್ಕಿಬಿದ್ದಿದ್ದಾನೆ.. ಸಿಕ್ಕರೆ ಸುಮ್ನೆ ಬಿಡ್ತಾರಾ..? ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಉತ್ತರ ಪ್ರದೇಶದ ಅಜಂಗಢದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಮನೆಯಲ್ಲಿ ವಿವಾಹಿತ ಮಹಿಳೆ ಒಬ್ಬಳೇ ಇದ್ದಳು.. ಈ ವೇಳೆ ಆಕೆ ತನ್ನ ಪ್ರಿಯಕರನನ್ನು ಕರೆಸಿಕೊಂಡಿದ್ದಾಳೆ.. ಆದ್ರೆ ಕೆಲಹೊತ್ತಿನಲ್ಲೇ ಮನೆಯವರು ಬಂದಿದ್ದಾರೆ.. ಇದರಿಂದಾಗಿ ತಪ್ಪಿಸಿಕೊಳ್ಳಲು ಆತ ಟ್ರಂಕ್‌ ಒಳಗೆ ತೂರಿದ್ದಾರೆ.. ಆದ್ರೆ ಅದ್ಹೇಗೋ ಆತ ಮನೆಯವರಿಗೆ ಸಿಕ್ಕಿಬಿದ್ದಿದ್ದಾನೆ.. ಆತನನ್ನು ಹಿಡಿದ ಮನೆಯವರು ಬಿದಿರು ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಬಿಟ್ಟುಬಿಡಿ ಎಂದರು ಬೇಡಿಕೊಂಡರೂ ಬಿಟ್ಟಿಲ್ಲ.. ಜೊತೆಗೆ ಕಪಾಳಮೋಕ್ಷ ಕೂಡಾ ಮಾಡಿದ್ದಾರೆ..

ಮೊದಲು ಕುಟುಂಬಸ್ಥರು ಕಳ್ಳನೆಂದು ಭಾವಿಸಿದ್ದರು.. ಅನಂತರ ನಿಜ ವಿಷಯ ಏನು ಅನ್ನೋದು ಗೊತ್ತಾಗಿದೆ.. ಅಜಂಗಢದ ದೇವಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share Post