Cinema

ಸಾಯಿ ಪಲ್ಲವಿ ‌ʻಲೇಡಿ ಪವನ್‌ ಕಲ್ಯಾಣ್‌ʼ ಎಂದ ಸುಕುಮಾರ್-ನಟಿಯ ಬಗ್ಗೆ ಮೆಚ್ಚುಗೆಯ ಮಾತುಗಳು

ಹೈದರಾಬಾದ್:‌ ಸಾಯಿ ಪಲ್ಲವಿ, ಹೆಸರು ಕೇಳಿದ ಕೂಡಲೇ  ಅವರ ವ್ಯಕ್ತಿತ್ವ ಅವರ ನಟನೆ ಕಣ್ಮುಂದೆ ಬರುತ್ತೆ. ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ, ತೆಲುಗಿನಲ್ಲಿ ಸತತ ಯಶಸ್ವಿ ಚಿತ್ರಗಳನ್ನು ಮಾಡುತ್ತಲೇ ಇದ್ದಾರೆ. ಇತರ ನಾಯಕಿಯರಿಗಿಂತ ಭಿನ್ನವಾಗಿ, ತುಂಬಾ ಸಹಜವಾದ ಪಾತ್ರಗಳನ್ನು ಮಾಡ್ತಾರೆ ಮತ್ತು ತಮ್ಮ ನಟನೆ ಮತ್ತು ನೃತ್ಯದಿಂದ ಪ್ರೇಕ್ಷಕರನ್ನು ಮೆಚ್ಚಿಸುತ್ತಾರೆ. ಸದ್ಯ ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಾಯಿ ಪಲ್ಲವಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸಾಯಿಪಲ್ಲವಿ ಅಭಿಮಾನಿಗಳಲ್ಲಿ ಪ್ರೇಕ್ಷಕರು ಮಾತ್ರವಲ್ಲ ಸೆಲೆಬ್ರಿಟಿಗಳೂ ಇದ್ದಾರೆ. ಸೆಲೆಬ್ರಿಟಿಗಳು ಸಾಯಿಪಲ್ಲವಿ ಬಿಹೇವಿಯರ್‌ಗೆ ಅಭಿಮಾನಿಗಳಾಗುತ್ತಿದ್ದಾರೆ ಅಂದ್ರೆ ಖಂಡಿತ ತಪ್ಪಾಗಲ್ಲ. ಇತ್ತೀಚೆಗೆ ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಕೂಡ ಸಾಯಿಪಲ್ಲವಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ʻಆಡವಾರ್ಲು ಮೀಕು ಜೋಹಾರ್ಲುʼ ಪ್ರೀ-ರಿಲೀಸ್‌  ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸುಕುಮಾರ್ ಸಾಯಿಪಲ್ಲವಿ ಒಬ್ಬ ʻಲೇಡಿ ಪವನ್‌ ಕಲ್ಯಾಣ್‌ʼ ಇದ್ದಂತೆ ಎಂದಿದ್ದಾರೆ. ನಟಿಯ ವರ್ತನೆ ಮತ್ತು ನಡವಳಿಕೆಯ ಬಗ್ಗೆ ಸಾಕಷ್ಟು ಹೇಳಿದ್ದಾರೆ.

ಸಾಯಿ ಪಲ್ಲವಿ ಕ್ರೇಜ್ ನೋಡಿದ್ರೆ ಅವರು ಲೇಡಿ  ಪವನ್ ಕಲ್ಯಾಣ್ ರಂತೆ ಕಾಣಿಸುತ್ತಾರೆ ಎಂಬ ಸುಕುಮಾರ್ ಹೇಳಿದ ಮಾತು ಇದೀಗ ಹಾಟ್ ಟಾಪಿಕ್ ಆಗಿದೆ. ಸಾಯಿ ಪಲ್ಲವಿ ಬಗ್ಗೆ ಮಾತನಾಡಬೇಕು ಅಂತ ಮೊದಲಿನಿಂದಲೂ ಆಸೆ ಇತ್ತು.. ಆದ್ರೆ ಹೇಳೋ ಅವಕಾಶ ಸಿಕ್ಕಿಲ್ಲ.. ಈಗ ಬಂದಿದೆ. ಸಾಯಿ ಪಲ್ಲವಿ ಒಬ್ಬ ಫೇಮಸ್ ನಟಿ ಅಷ್ಟೇ ಅಲ್ಲ ಅವರು ಸರಳ ವ್ಯಕ್ತಿ. ಬಹಳ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ. ಸಾಯಿ ಪಲ್ಲವಿ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

Share Post