Cinema

ಚಿತ್ರೀಕರಣಕ್ಕೂ ಮೊದಲೇ ಪುಷ್ಪ 2 ಸಿನಿಮಾಗೆ 400 ಕೋಟಿ ಆಫರ್‌

ಹೈದರಾಬಾದ್‌ : ಪುಷ್ಪ ಸಿನಿಮಾ ಸೆಟ್ಟೇರಿದ ದಿನದಿಂದಲೇ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿತ್ತು. ಇನ್ನು ಸಿನಿಮಾ ರಿಲೀಸ್‌ ಆದ ಮೇಲಂತೂ ಅದರ ಹವಾ ಸಖತ್‌ ಜೋರಾಗಿಯೇ ಇತ್ತು. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ದಿ ರೈಸ್‌ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದೆ.

ಒಂದು ವರ್ಗದವರಿಗೆ ಸಿನಿಮಾ ಇಷ್ಟ ಆಯ್ತು, ಇನ್ನೊಂದು ವರ್ಗಕ್ಕೆ ಸಿನಿಮಾ ಲ್ಯಾಗ್‌ ಎನಿಸಿದರೂ ಕೂಡ ಸಿನಿಮಾ ಸಕ್ಸಸ್‌ ಕಂಡಿದೆ. ಕೋವಿಡ್‌ ಸಂದರ್ಭದಲ್ಲಿಯೂ ಭಾರಿ ಗಳಿಕೆ ಮಾಡಿರುವ ಪುಷ್ಪ ಸಿನಿಮಾ ನೋಡಿದ ಸಿನಿ ಪಂಡಿತರು ಬೆರಗಾಗಿದ್ದಾರೆ.

ಅಮೆಜಾನ್‌ ನಲ್ಲಿ ಸಿನಿಮಾ ಸ್ವಲ್ಪ ಬೇಗನೇ ಬಂತಾದರೂ ಅದರಿಂದ ಚಿತ್ರತಂಡಕ್ಕೆ ಇನ್ನು ಲಾಭವೇ ಆಗಿದೆ. ಸಿನಿಮಾ ನೋಡಿದ ಮಂದಿ ಸಿನಿಮಾ ಇಷ್ಟ ಪಡಲು ಶುರು ಮಾಡಿದ್ದಾರೆ. ಒಟ್ಟಾರೆ 300 ಕೋಟಿ ಕಲೆಕ್ಷನ್‌ ಮಾಡಿರುವ ಸಿನಿಮಾ ಬಾಲಿವುಡ್‌ ಒಂದರಲ್ಲೇ 90 ಕೋಟಿಗೂ ಹೆಚ್ಚು ಗಳಿಸಿದೆ.

ಈಗ ಪುಷ್ಪ ಸೀಕ್ವೆಲ್‌ಗೆ ಭಾರಿ ಮೊತ್ತದ ಡಿಮ್ಯಾಂಡ್‌ ಸೃಷ್ಠಿಯಾಗಿದೆ. 400 ಕೋಟಿಯ ಆಫರ್‌ ಅನ್ನು ಪ್ರೊಡಕ್ಷನ್‌ ಸಂಸ್ಥೆಯೊಂದು ನೀಡಿದೆ. ಸಿನಿಮಾ ತಂಡ ಇನ್ನು ಚಿತ್ರೀಕರಣವನ್ನೇ ಶುರು ಮಾಡಿಲ್ಲ ಆಗಲೇ ಸಿನಿಮಾ  ಸಿನಿಮಾ ಹಕ್ಕನ್ನು ನೀಡುವಂತೆ ಕೇಳಿದ್ದಾರೆ. ದೊಡ್ಡ ಮೊತ್ತವನ್ನು ಆಫರ್ ಅನ್ನು ಚಿತ್ರತಂಡ ಒಪ್ಪಲಿದೆಯೇ ಎಂದು ಕಾದು ನೋಡಬೇಕು.

 

ಇದನ್ನು ಓದಿ : ನಾಳೆ ಜೇಮ್ಸ್‌ ಚಿತ್ರದ ಫಸ್ಟ್‌ ಲುಕ್‌ ರಿಲೀಸ್

Share Post