CrimeNational

ಮದುವೆ ಮನೆಗೆ ನುಗ್ಗಿ ವಧುವಿನ ಕಿಡ್ನ್ಯಾಪ್‌; ಅಡ್ಡ ಬಂದ ತಂದೆಯ ಕಾಲು, ಸಹೋದರನ ಕೈ ಕಟ್‌!

ಭೋಪಾಲ್; ಮದುವೆ ಮನೆಗೆ ನುಗ್ಗಿದ ಗ್ಯಾಂಗ್‌ ಒಂದು ಮದುಮಗಳನ್ನು ಕಿಡ್ನಾಪ್‌ ಯತ್ನ ಮಾಡಿದ್ದು, ಈ ವೇಳೆ ಅಡ್ಡ ಬಂದ ಆಕೆಯ ತಂದೆಯ ಕಾಲು ಹಾಗೂ ಸಹೋದರನ ಕೈ ಮುರಿದಿದ್ದಾರೆ.. ಮಧ್ಯಪ್ರದೇಶದ ಅಶೋಕ್‌ ನಗರದಲ್ಲಿ ಇಂತದ್ದೊಂದು ರೌಡಿ ಕೃತ್ಯ ನಡೆದಿದೆ..

ರೌಡಿ ಕಲು ಅಲಿಯಾಸ್ ಸಲೀಂ ಖಾನ್ ಎಂಬಾತ 22 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ, ಅದರ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದ.. ಆದ್ರೂ ಕೂಡಾ ಯುವತಿಯ ಮನೆಯವರು ಬೇರೆಯ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು.. ನಿನ್ನೆ ಮದುವೆ ನಡೆಯಬೇಕಿತ್ತು.. ಇದೇ ವೇಳೆ ರೌಡಿ ಕಲು ಅಲಿಯಾಸ್ ಸಲೀಂ ಖಾನ್  ಎಂಟ್ರಿ ಕೊಟ್ಟಿದ್ದಾನೆ.. ತನ್ನ ಗ್ಯಾಂಗ್‌ ಜೊತೆ ಬಂದ ರೌಡಿ, 22 ವರ್ಷದ ವಧುವನ್ನು ಕಿಡ್ನಾಪ್‌ ಯತ್ನ ಮಾಡಿದ್ದಾನೆ..

ಈ ವೇಳೆ ಮದುಮಗಳ ತಂದೆ ಹಾಗೂ ಸಹೋದರ ಅಡ್ಡ ಬಂದಿದ್ದಾರೆ.. ಈ ವೇಳೆ ಅವರ ಮೇಲೆ ಹಲ್ಲೆ ನಡೆದಿದ್ದು, ತಂದೆಯ ಕಾಲು ಹಾಗೂ ಸಹೋದರನ ಕೈ ಮುರಿಯಲಾಗಿದೆ.. ಇದೇ ವೇಳೆ ಮದುವೆ ಮಂಟಪದಲ್ಲಿದ್ದವರು ಎಲ್ಲರೂ ಕಿರುಚಾಡಿದ್ದಾರೆ.. ಇದರಿಂದಾಗಿ ರೌಡಿ ಗ್ಯಾಂಗ್‌ ಯುವತಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದೆ..

ಪರಾರಿಯಾಗುವ ಮೊದಲು ಮದುಮಗಳು ಹಾಗೂ ಮದುಮಗನ ಕುಟುಂಬಕ್ಕೆ ಬೆದರಿಕೆ ಹಾಕಿ ಹೋಗಿದ್ದಾರೆ.. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

 

 

Share Post