CrimePolitics

ಲೈಂಗಿಕ ದೌರ್ಜನ್ಯ ಪ್ರಕರಣ; ಜೂನ್‌ 6ರವರೆಗೆ ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ಕಸ್ಟಡಿ

ಬೆಂಗಳೂರು; ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣದಲ್ಲಿ ರಾತ್ರಿ ಬಂಧಿತನಾಗಿರುವ ಪ್ರಜ್ವಲ್‌ ರೇವಣ್ಣಗೆ ಆರು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ..  42ನೇ ಎಸಿಎಂಎಂ ಕೋರ್ಟ್ ಈ ಆದೇಶ ಹೊರಡಿಸಿದ್ದು, ಜೂನ್‌ 6ರವರೆಗೆ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ..

ಮಧ್ಯರಾತ್ರಿ ಜರ್ಮನಿಯಿಂದ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ಮೊದಲಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದರು.. ಅನಂತರ ಮಧ್ಯಾಹ್ನ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು, ಪ್ರಜ್ವಲ್‌ ರೇವಣ್ಣನನ್ನು ಆರು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿದರು.. ಈ ಮೂಲಕ ಎಸ್‌ಐಟಿ ಮನವಿಯನ್ನು ಪುರಸ್ಕರಿಸಿದರು..

ಪ್ರಜ್ವಲ್ ರೇವಣ್ಣ ಪರ ವಕೀಲರಾದ ಅರುಣ್ ಅವರು ಕಸ್ಟಡಿಗೆ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.. ಜಾಮೀನು ನೀಡುವಂತೆ ಮನವಿ ಮಾಡಿದರು.. ಲೈಂಗಿಕ ದೌರ್ಜನ್ಯ & ಅತ್ಯಾಚಾರ ಪ್ರಕರಣಗಳಲ್ಲಿ ವಿಚಾರಣೆ ಮಾಡಬೇಕಿರುವುದರಿಂದ ವಶಕ್ಕೆ ಕೊಡಬೇಕೆಂದು ಎಸ್‌ಐಟಿ ಪರ ವಕೀಲರು ವಾದ ಮಾಡಿದರು.. ಇದಕ್ಕೆ ನ್ಯಾಯಾಧೀಶರು ಸ್ಪಂದಿಸಿ ಆರು ದಿನ ಎಸ್‌ಐಟಿ ವಶಕ್ಕೆ ನೀಡಿದರು..

ಕೋರ್ಟ್‌ ಕಟಕಟೆಯಲ್ಲಿ ನಿಂತಿದ್ದ ಪ್ರಜ್ವಲ್ ರೇವಣ್ಣಗೆ ನ್ಯಾಯಾಧೀಶರು ಹಲವು ಪ್ರಶ್ನೆಗಳನ್ನು ಕೇಳಿದರು.. ಮೊದಲಿಗೆ ಹೆಸರೇನು ಎಂದು ಕೇಳಿದರು.. ಎಸ್‌ಐಟಿ ಅಧಿಕಾರಿಗಳಿಂದ ನಿಮಗೇನಾದರೂ ಟಾರ್ಚರ್‌  ಆಯ್ತಾ ಎಂದು ಕೇಳಿದರು.. ಇಲ್ಲ ಎಂದು ಹೇಳಿದ ಪ್ರಜ್ವಲ್‌, ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯದಲ್ಲಿ ತುಂಬಾ ವಾಸನೆ ಇದೆ ಎಂದು ದೂರು ಹೇಳಿದರು.. ಈ ವೇಳೆ ಕೋರ್ಟ್‌ ಹಾಲ್‌ ನಲ್ಲಿದ್ದರು ನಗಾಡಿದರು..

ಇದೇ ವೇಳೆ ಎಸ್‌ಐಟಿ ಕಸ್ಟಡಿಯಲ್ಲಿರುವಾಗ ಮನೆಯೂಟ ನೀಡಲು ಅವಕಾಶ ನೀಡಬೇಕೆಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಎಸ್‌ಐಟಿ ಅಧಿಕಾರಿಗಳು ಮನೆಯೂಟ ಬೇಡ, ನಾವೇ ಕೊಡುತ್ತೇವೆ ಎಂದು ಹೇಳಿದರು..

 

Share Post