ದೇಶದ ಗಡಿಯಲ್ಲಿ ಮತ್ತಿಬ್ಬರು ಉಗ್ರರು ಮಟಾಶ್
ಜಮ್ಮು-ಕಾಶ್ಮೀರ: ದೇಶಕ್ಕೆ ಮಾರಕವಾಗದ ಉಗ್ರರ ರುಂಡಗಳನ್ನು ಸೇನಾಪಡೆಗಳು ಸದಾ ಚಂಡಾಡುತ್ತಲೇ ಇರುತ್ತಾರೆ. ಕಣ್ಣಿಗೆ ಎಣ್ಣೆ ಹಾಕೊಂಡು ದೇಶ ಕಾಯುವ ಯೋಧರು ತಾಯ್ನಾಡಿಗಾಗಿ ಸದಾ ಸನ್ನದ್ದರಾಗಿರುತ್ತಾರೆ. ನಿನ್ನೆಯಷ್ಟೇ ಮೋಸ್ಟ್ ವಾಂಟೆಡ್ ಎಲ್‌ಇಟಿ ಉಗ್ರನನ್ನು ಹೊಡೆದುರುಳಿಸಿದ್ರು. ಇದರ ಬೆನ್ನಲ್ಲೇ ಇಂದು ಕೂಡ ಮತ್ತಿಬ್ಬರು ಉಗ್ರರಿಗೆ ಗುಂಡಿಕ್ಕಿದ್ದಾರೆ.
ಕುಲ್ಗಾಂ ಜಿಲ್ಲೆಯ ಕಾರ್ಯಾಚರಣೆ ವೇಳೆ ಮತ್ತಿಬ್ಬರು ಉಗ್ರರನ್ನು ರಕ್ಷಣಾ ಪಡೆಗಳು ಗುಂಡಿಕ್ಕಿ ಕೊಂದಿರುವುದಾಗಿ ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿದ ಭಯೋತ್ಪಾದಕರು ಸ್ಥಳೀಯರಾಗಿದ್ದು ಎಲ್‌ಇಟಿ ಸೇರಿಕೊಂಡಿದ್ರು ಎಂದು ಕಾಶ್ಮೀರ ಕಮಿಷನರ್ ವಿಜಯ್ ಕುಮಾರ್ ತಿಳಿಸಿದ್ದಾರೆ. ಕೆಲವು ಉಗ್ರ ಕೃತ್ಯಗಳಲ್ಲಿಯೂ ಭಾಗಿಯಾಗಿದ್ರು ಎಂಬ ಮಾಹಿತಿಯನ್ನು ನೀಡಿದ್ದಾರೆ.