CinemaNational

ಆಮ್‌ ಆದ್ಮಿ ಪಾರ್ಟಿ ಸೇರಿದ ನಟಿ ಕಂಗನಾ; ಹಾಟ್‌ ಹಾಟ್‌ ಫೋಟೋ ವೈರಲ್‌

ಹರಿಯಾಣ; ಗ್ರೇಟ್ ಗ್ರ್ಯಾಂಡ್ ಮಸ್ತಿ ಎಂಬ ಅಡಲ್ಟ್ ಕಾಮಿಡಿ ಸಿನಿಮಾ ಮೂಲಕ ಫೇಮಸ್ ಆದ ಕಂಗನಾ ಶರ್ಮಾ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹರಿಯಾಣದಲ್ಲಿ ಅವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ಅಫ್ತಾಭ್ ಶಿವದಾಸ್‌ ನಾದಿನಿ ಪಾತ್ರ ಮಾಡಿದ್ದ ಕಂಗನಾ ಹೆಚ್ಚು ಫೇಮಸ್‌ ಆಗಿದ್ದರು. ಹದಿಹರೆಯದ ಹುಡುಗರ ಹೃದಯ ಗೆದ್ದಿದ್ದರು. ಈ ಸಿನಿಮಾ ನಂತರ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಈ ನಡುವೆ ಅವರು ರಾಜಕೀಯಕ್ಕೆ ಧುಮುಕಿದ್ದಾರೆ. ಗುರುವಾರ ಅವರು ಆಮ್ ಆದ್ಮಿ ಪಾರ್ಟಿ ಸೇರುತ್ತಿದ್ದಂತೆ, ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಕಂಗನಾ ಹಾಟ್ ಹಾಟ್ ಫೋಟೋಗಳನ್ನು ಅಭಿಮಾನಿಗಳು ಅಪ್ ಲೋಡ್ ಮಾಡುತ್ತಿದ್ದಾರೆ. ಇದು ಆಮ್‌ ಆದ್ಮಿ ಪಾರ್ಟಿಗೆ ಮುಜುಗರ ತರಿಸಿದೆ.

 

2016ರಲ್ಲಿ ಬಾಲಿವುಡ್ ಪ್ರವೇಶ ಮಾಡಿದ್ದ ಕಂಗನಾ ಶರ್ಮಾ, ಆನಂತರ ಹಲವು ಚಲನಚಿತ್ರಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.  ಹಾಟ್ ಹಾಟ್ ಪಾತ್ರಗಳಿಗೆ ಸೀಮಿತವಾಗಿ ಉಳಿದರೂ, ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.

 

Share Post