CinemaLifestyleNational

ಡಿವೋರ್ಸ್‌ ಆಗಿ ವಾರ ಕಳೆದಿಲ್ಲ, ಆಗ್ಲೇ ಪತ್ನಿ ಬೇಕು ಅಂತ ಸುಶ್ಮಿತಾ ಸೇನ್‌ ಸಹೋದರ..!

ಮುಂಬೈ; ಬಾಲಿವುಡ್‌ ಮಂದಿಯಲ್ಲಿ ಮದುವೆಗಳು, ಡಿವೋರ್ಸ್‌ಗಳು ಕಾಮನ್‌. ಅದೇ ರೀತಿ ಸ್ಟಾರ್‌ ನಟಿ ಸುಶ್ಮಿತಾ ಸೇನ್‌ ಅವರ ಸಹೋದರ ರಾಜೀವ್‌ ಸೇನ್‌ ಕೂಡಾ ತಮ್ಮ 4 ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಪತ್ನಿ ಹಾಗೂ ಕಿರುತೆರೆ ನಟಿ ಅಸೋಪಾಗೆ ಅವರು ವಾರದ ಹಿಂದಷ್ಟೇ ಡಿವೋರ್ಸ್‌ ನೀಡಿದ್ದರು. ಆದ್ರೆ ಇದೀಗ ನನ್ನ ಪತ್ನಿ ಬೇಕು. ಈಗ ಮತ್ತೆ ಒಂದಾಗುತ್ತೇವೆ ಅಂತಿದದಾರೆ ರಾಜೀವ್‌ ಸೇನ್‌.

ಜೂನ್‌ ಎಂಟರಂದು ರಾಜೀವ್‌ ಸೇನ್‌ ಹಾಗೂ ಅಸೋಪಾ ಡಿವೋರ್ಸ್‌ ಆಗಿತ್ತು. ಇಬ್ಬರಿಗೂ ಒಂದು ಹೆಣ್ಣು ಮಗಳು ಕೂಡಾ ಇದ್ದಾಳೆ. ಹೀಗಿರುವಾಗಲೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚಾರು ಅಸೋಪಾ, ನಾವಿಬ್ಬರೂ ಪರಸ್ಪರ ಒಳ್ಳೆಯದನ್ನೇ ಬಯಸುತ್ತೇವೆ ಎಂದು ಹೇಳಿದ್ದಾರೆ. ಆಕೆ ಹೀಗೆ ಹೇಳುತ್ತಿದ್ದಂತೆ ರಾಜೀವ್‌ ಸೇನ್‌ ಬದಲಾದಂತೆ ಕಾಣುತ್ತಿದೆ, ತಂದೆಯಾಗಿ ಮಗಳಿಗೆ ಹೆಚ್ಚಿನ ಸಮಯ ಕೊಡಬೇಕಿದೆ. ಚಾರು ಅಸೋಪಾರನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ. ನನ್ನ ಪ್ರೀತಿ ಹಾಗೂ ಬೆಂಬಲ ಹೀಗೆಯೇ ಇರುತ್ತೆ ಎಂದಿರುವ ರಾಜೀವ್‌ ಸೇನ್‌, ಒಂದು ದಿನ ನಾನು ಚಾರು ಒಂದಾಗುತ್ತೇವೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ.

ಜೂನ್‌ 16ಕ್ಕೆ ಅವರ ಮದುವೆ ವಾರ್ಷಿಕೋತ್ಸವ ಇದೆ. ಅಂದರೆ ನಾಳೆ. ಇಂತಹ ಸಮಯದಲ್ಲಿ ಇಬ್ಬರೂ ಇಂತಹ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಳೆಯೇ ಇಬ್ಬರೂ ಒಂದಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

Share Post