CinemaCrime

ಟಾಲಿವುಡ್‌ ಕೊರಿಯೊಗ್ರಾಫರ್‌ ಟೀನಾ ಸಿಧು ಅನುಮಾನಾಸ್ಪದ ಸಾವು

ಗೋವಾ: ಟಾಲಿವುಡ್ ಕೊರಿಯೋಗ್ರಾಫರ್ ಮತ್ತು ರಿಯಾಲಿಟಿ ಶೋ ವಿಜೇತೆ ಟೀನಾ ಸಿಧು ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಗೋವಾದಲ್ಲಿ ಪತ್ತೆಯಾಗಿದೆ. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಹಲವು ಅನುಮಾನಗಳಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಟೀನಾ ಸಾವಿನ ಸಾವಿನ ವಿಷಾಯವನ್ನು ಕೊರಿಯೋಗ್ರಾಫರ್ ಆಟ ಸಂದೀಪ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಟೀನಾ ಅವರ ನಿಧನ ಸುದ್ದಿ ತಿಳಿದು ನನಗೆ ತೀವ್ರ ಆಘಾತವಾಗಿದೆ. ಇದರಿಂದ ನಾನು ದುಃಖಿತನಾಗಿದ್ದೇನೆ. ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಟೀನಾ ನನ್ನ ಜೋಡಿಯಾಗಿದ್ದರು. ಅವರು ತುಂಬಾ ವಿನಮ್ರ ವ್ಯಕ್ರಿಯಾಗಿದ್ದರು. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಟೀನಾಗೆ ಶಾಂತಿ ಸಿಗಲಿ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.

Share Post