BengaluruCinema

ಕಾಂತಾರಾ, ಕೆಜಿಎಫ್‌ ದಾಖಲೆ ಮುರಿದ ಕಬ್ಜ; ಮೊದಲ ದಿನವೇ 50 ಕೋಟಿ ಕಲೆಕ್ಷನ್

ಬೆಂಗಳೂರು; ನಿನ್ನೆಯಷ್ಟೇ ರಿಲೀಸ್‌ ಆದ ಆರ್‌.ಚಂದ್ರ ನಿರ್ದೇಶನ ಕಬ್ಜ ಮೂವಿ ದಾಖಲೆ ನಿರ್ಮಿಸಿದೆ. ಮೊದಲ ದಿನವೇ 50 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದ್ದು, ಕಾಂತಾರಾ, ಕೆಜಿಎಫ್‌ ಚಿತ್ರಕ್ಕಿಂತ ಹೆಚ್ಚು ಎಂದು ತಿಳಿದುಬಂದಿದೆ. ಇದು ಕನ್ನಡ ಸಿನಿಮಾ ದಾಖಲಿಸಿದ ಮತ್ತೊಂದು ಬೃಹತ್‌ ದಾಖಲೆ ಅಂತಾನೇ ಹೇಳಬಹುದು.

ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕಬ್ಜ ಚಿತ್ರ ವಿದೇಶಗಳಲ್ಲೂ ರಿಲೀಸ್‌ ಆಗಿದೆ. ವಿದೇಶಗಳಲ್ಲೇ ಮೊದಲ ದಿನ ಹತ್ತು ಕೋಟಿ ರೂಪಾಯಿ ಕಲೆಕ್ಷನ್‌ ಆಗಿದೆ ಎಂದು ಹೇಳಲಾಗುತ್ತಿದೆ. ಪ್ರೇಕ್ಷಕರು ಕಬ್ಜ ಚಿತ್ರ ನೋಡಿ ಫಿದಾ ಆಗಿದ್ದಾರೆ. ಮೊದಲ ದಿನವೇ ಥಿಯೇಟರ್‌ಗಳ ಸಂಖ್ಯೆ ಹೆಚ್ಚಳವಾಗಿದೆ. ಶನಿವಾರ, ಭಾನುವಾರ ಗಳಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

Share Post