CrimeNational

ಪೊಲೀಸ್‌ ಠಾಣೆ ಎದುರೇ ತಾಯಿಗೆ ಬೆಂಕಿ ಹಚ್ಚಿದ ಪಾಪಿ ಮಗ!

ಅಲಿಘಡ; ಆಸ್ತಿ ವಿಚಾರಕ್ಕೆ ಪೊಲೀಸ್‌ ಠಾನೆಯ ಎದುರುಗಡೆಯೇ ಹೆತ್ತ ಮಗನೇ ತಾಯಿಗೆ ಬೆಂಕಿ ಹಚ್ಚಿದ್ದಾನೆ.. ಇಂತಹದ್ದೊಂದು ಪೈಶಾಚಿಕಿ ಕೃತ್ಯ ಉತ್ತರಪ್ರದೇಶದ ಅಲಿಘಡದಲ್ಲಿ ನಡೆದಿದೆ.. ವಾಸವಿರುವ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡಬೇಕೆಂದು ಮಗ ಒತ್ತಾಯ ಮಾಡುತ್ತಿದ್ದ.. ಆದ್ರೆ ತಾಯಿ ಆಸ್ತಿ ಬರೆದುಕೊಟ್ಟರೆ ನನ್ನನ್ನು ಹೊರಗಾಕುತ್ತಾನೆ ಎಂದು ಭಯಬಿದ್ದಿದ್ದಳು.. ಕೊನೆಗೆ ಇಬ್ಬರೂ ಪೊಲೀಸ್‌ ಠಾಣೆಗೆ ಬಂದಿದ್ದರು.. ಇದೇ ವೇಳೆ ಮಗ ತಾಯಿಗೆ ಬೆಂಕಿ ಹಚ್ಚಿದ್ದಾನೆ..

ಇದನ್ನೂ ಓದಿ; ಮೊದಲ ಬಾರಿಗೆ ಆಯ್ಕೆಯಾದ ಕಾಂಗ್ರೆಸ್‌ ಶಾಸಕರ ಗುಪ್ತ್‌ ಗುಪ್ತ್‌ ಮೀಟಿಂಗ್‌!

ಮನೆಯಲ್ಲಿ ಜಗಳ ತಾರಕಕ್ಕೇರಿದ್ದರಿಂದ ತಾಯಿ-ಮಗ ಪೊಲೀಸ್‌ ಠಾಣೆಗೆ ಬಂದಿದ್ದರು.. ಪೊಲೀಸರು ಇಬ್ಬರಿಗೂ ಸಮಾಧಾನ ಹೇಳಿ ಕಳುಹಿಸಿದ್ದಾರೆ.. ಆದ್ರೆ ಠಾಣೆಯಿಂದ ಹೊರಬರುತ್ತಿದ್ದಂತೆ ಇಬ್ಬರೂ ಜಗಳವಾಡಿದ್ದಾರೆ.. ಈ ವೇಳೆ ತಾಯಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.. ಇದೇ ಛಾನ್ಸ್‌ಗಾಗಿ ಕಾಯುತ್ತಿದ್ದ ಮಗ, ತಾನೇ ಕಡ್ಡಿ ಗೀರಿ ತಾಯಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಕೂಡಲೇ ಗೋಣಿ ಚೀಲಗಳನ್ನು ತಂದು ಬೆಂಕಿ ನಂದಿಸಿದ್ದಾರೆ.. ಆದ್ರೆ ಆಕೆಯ ದೇಹ ಬಹುತೇಕ ಸುಟ್ಟುಹೋಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ..

ಇದನ್ನೂ ಓದಿ; 7ನೇ ವೇತನ ಆಯೋಗ ಶಿಫಾರಸು ಜಾರಿ; ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

Share Post