ಬಿಜೆಪಿ ಸರ್ಕಾರ ಜಾಹಿರಾತಿಗಾಗಿ ವ್ಯಯಿಸಿದ್ದು 700 ಕೋಟಿ
ಚಂಡೀಗಡ : ಬಿಜೆಪಿ ಸರ್ಕಾರ ೨೦೧೫ರಿಂದೀಚೆಗೆ ತಮ್ಮ ಸಾಧನೆ ಮತ್ತು ಯೋಜನೆಗಳನ್ನು ಜನರಿಗೆ ವಿವರಿಸುವ ಸಲುವಾಗಿ ಹರಿಯಾಣದ ಬಿಜೆಪಿ ಸರ್ಕಾರ ಬರೋಬ್ಬರಿ ೭೦೦ ಕೋಟಿ ಖರ್ಚು ಮಾಡಿದೆ. ಕಾಂಗ್ರೆಸ್ ಶಾಸಕ ಅಫ್ತಾಬ್ ಅಹ್ಮದ್ ಕೇಳಿದ ಪ್ರಶ್ನೆಗೆ ಬಿಜೆಪಿ ಸರ್ಕಾರ ಲಿಖಿತ ಉತ್ತರ ನೀಡಿದೆ.
೨೦೧೫ ಜನವರಿ ಯಿಂದ ೨೦೨೧ ಡಿಸೆಂಬರ್ವರೆಗೆ ಸರ್ಕಾರ ಖರ್ಚು ಮಾಡಿದ್ದು ಈ ರೀತಿ ಇದೆ.
ಪತ್ರಿಕೆ ಜಾಹಿರಾತು – ೫೯೬ ಕೋಟಿ
ಟಿವಿ ಜಾಹಿರಾತು – ೯೬.೩೪ ಕೋಟಿ
ರೇಡಿಯೋ – ೨೧.೭೬ ಕೋಟಿ
ಇಂಟರ್ನೆಟ್ – ೧.೧೯ ಕೋಟಿ
ಬ್ಯಾನರ್ಗಳಿಗೆ – ೪.೩೯ ಲಕ್ಷ