National

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 80ಲಕ್ಷ ಮನೆಗಳ ನಿರ್ಮಾಣ

ದೆಹಲಿ:  ಬಡವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2022-23ರ ಅವಧಿಯಲ್ಲಿ ಪ್ರಧಾನಿ ಆವಾಸ್‌ ಯೋಜನೆಯಲ್ಲಿ 80ಲಕ್ಷ ಮನೆಗೆಳ ನಿರ್ಮಾಣ ಸರ್ಕಾರದ ಗುರಿ ಎಂದಿದ್ದಾರೆ.  ಮನೆಗಳ ನಿರ್ಮಾಣಕ್ಕೆ 48ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು,  2023ರೊಳಗೆ 18ಲಕ್ಷ ಮನೆಗಳನ್ನು ಪೂರ್ತಿ ಮಾಡುವ ಗುರಿ ಹೊಂದಿದ್ದಾರೆ.

ಹಾಗೆಯೇ ಹೊಸದಾಗಿ 5.7 ಕೋಟಿ ಕುಟುಂಬಗಳಿಗೆ ಕುಡಿಯುವ ನೀರ ಪೂರೈಕೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಪ್ರತಿ ಮನೆಗೆ ನಲ್ಲಿ ನೀರಿನ ವ್ಯವಸ್ತೆಗಾಗಿ ಹರ್-ಘರ್‌ ನಲ್-ಜಲ್‌ ಯೋಜನೆಯನ್ನು ಘೋಷಣೆ ಮಾಡಲಾಗಿದೆ, ಈ ಯೋಜನೆಗೆ ಬರೋಬ್ಬರಿ 60 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ. ಪ್ರತಿ ಮನೆ ಮನೆಗೆ ನೀರಿನ ವ್ಯವಸ್ಥೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಘೋಷನೆ ಮಾಡಲಾಗಿದೆ.

Share Post