ಪ್ರಾಣಹೋದ್ರೂ ಬಿಡದ ಕಾಮುಕರು: ನೀಚರ ಕಾಮತೃಷೆಗೆ ಇನ್ನೆಷ್ಟು ಬಲಿ?
ರಾಜಸ್ಥಾನ: ಹದಿನಾರು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಹದಿನಾರು ವರ್ಷದ ಬಾಲಕಿ ಡಿಸೆಂಬರ್ 23ರಂದು ಮೇಕೆ ಮೇಯಿಸಲು ಕಾಡಿಗೆ ಹೋಗಿದ್ದಾಳೆ. ಈ ವೇಳೆ ಬಾಲಕಿ ಮೇಲೆ ಕಣ್ಣಾಕಿದ ಕಾಮುಕರು ಅತ್ಯಚಾರ ಮಾಡಿ ಸಾಯಿಸಿದ್ದಾರೆ. ಮಗಳು ಮನೆಗೆ ಬಾರದಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ರು. ಕಾಡಿನ ಮಧ್ಯೆ ಬಟ್ಟೆಯಿಲ್ಲದೆ ಅನಾಥವಾಗಿ ಬಿದ್ದಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ಬಾಲಕಿ ಶವವನ್ನು ಪೋಸ್ಟ್ ಮಾರ್ಟಮ್ ರಿಪೋರ್ಟ್‌ಗೆ ಕಳಿಸಿದ್ದಾರೆ. ರಿಪೋರ್ಟ್ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಬಾಲಕಿ ದೇಹದಲ್ಲಿ ಮೂವತ್ತು ಗಂಭೀರ ಗಾಯಗಳಾಗಿವೆ. ಮೊದಲು ಆಕೆಯನ್ನು ಸಾಯಿಸಿ ನಂತರ ಅತ್ಯಾಚಾರ ಮಾಡಲಾಗಿದೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ರು. ರಿಪೋರ್ಟ್ ಆಧಾರದ ಮೇಲೆ ಮೂವರು ಕಿರಾತಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂತಹ ನೀಚರಿಗೆ ಬಹಿರಂಗವಾಗಿ ಶಿಕ್ಷೆ ನೀಡಿ. ಮುಂದೆ ಇನ್ನೆಂದು ಇಂತಹ ಕೆಲಸ ಮಾಡಲು ಎಲ್ಲರೂ ಹೆದರಬೇಕು ಎನ್‌ಕೌಂಟರ್ ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.