Crime

ಪಕ್ಷಾಂತರ ಶಾಸಕರಿಗೆ ಆಮಿಷ ಪ್ರಕರಣ; ಸಚಿವ ಅಶ್ವತ್ಥನಾರಾಯಣ್‌ಗೆ ರಿಲೀಫ್‌

ಬೆಂಗಳೂರು: ಬಿಜೆಪಿ ಬೆಂಬಲಿಸಲು ಶಾಸಕರಿಗೆ ಆಮಿಷವೊಡ್ಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥನಾರಾಯಣ ಹಾಗೂ ಇನ್ನಿತರ ಬಿಜೆಪಿ ಶಾಸಕರಿಗೆ ರಿಲೀಫ್‌ ಸಿಕ್ಕಿದೆ. ಕೆಲ ನ್ಯಾಯಾಲಯ ನೀಡಿದ್ದ ಸಮನ್ಸ್‌ ಆದೇಶ ರದ್ದುಗೊಳಿಸಿ ಹೈಕೋರ್ಟ್‌ ತೀರ್ಪು ನೀಡಿದೆ.

೧೭ ಶಾಸಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದರು. ಈ ವೇಳೆ ಅಶ್ವತ್ಥನಾರಾಯಣ, ಎಸ್‌.ಆರ್‌.ವಿಶ್ವನಾಥ್‌ ಸೇರಿದಂತೆ ಹಲವು ಬಿಜೆಪಿ ಶಾಸಕರು, ಪಕ್ಷಾಂತರವಾಗುವಂತೆ ಬೇರೆ ಪಕ್ಷದ ಶಾಸಕರಿಗೆ ಆಮಿಷವೊಡ್ಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಕೋರ್ಟ್‌ನಲ್ಲಿದ್ದು, ಅಶ್ವತ್ಥನಾರಾಯಣ ಸೇರಿ ಹಲವು ಶಾಸಕರಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ ಹೈಕೋರ್ಟ್‌ ಸಮನ್ಸ್‌ ರದ್ದು ಮಾಡಿ ಆದೇಶ ಹೊರಡಿಸಿದೆ.

ಖಾಸಗಿ ದೂರು ಪರಿಗಣಿಸುವಾಗ ಪ್ರಕ್ರಿಯೆ ಪಾಲಿಸಬೇಕು. ಪೂರ್ವಾನುಮತಿ ಸಂಬಂಧಿಸಿದಂತೆ ನಿಯಮ ಪಾಲನೆ ಮಾಡಬೇಕು ಎಂದು ಹೈಕೋರ್ಟ್‌ ಇದೇ ವೇಳೆ ಅಭಿಪ್ರಾಯಪಟ್ಟಿದೆ.

ದೂರುದಾರ ಅಬ್ರಹಾಂ ಟಿ.ಜೆ ಅವರು ಜನಪ್ರತಿನಧಿಗಳ ವಿಶೇಷ ನ್ಯಾಯಾಲಯದಲ್ಲಿ ‘ಆಪರೇಷನ್ ಕಮಲ’ದ ಭಾಗವಾಗಿ ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಳ್ಳಲು ಕೋಲಾರದ ಶಾಸಕ ಶ್ರೀನಿವಾಸಗೌಡಗೆ 30 ಕೋಟಿ ರೂಪಾಯಿ ಲಂಚದ ಆಮಿಷವನ್ನು ನೀಡಿ ರೂ.5 ಕೋಟಿ ಮುಂಗಡವಾಗಿ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖಾಸಗಿ ದೂರು ದಾಖಲಿಸಿದ್ದರು. ಸಚಿವ ಡಾ. ಡಾ.ಅಶ್ವಥ್ ನಾರಾಯಣ, ಮಾಜಿ ಸಿಎಂ  ಶ್ಎಚ್.ಡಿ.ಕುಮಾರಸ್ವಾಮಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಮಾಜಿ ಸಚಿವ ಸಿ.ಪಿ.ಯೊಗೇಶ್ವರ್ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಗೌಡ ರವರ ವಿರುದ್ಧ  ನ್ಯಾಯಾಲಯದಿಂದ ಸಮನ್ಸ್ ಹೊರಡಿಸಲಾಗಿತ್ತು.

Share Post