Cinema

ಜಿಮ್‌ ರವಿ ಈಗ ʼಪುರುಷೋತ್ತಮʼ

ಬೆಂಗಳೂರು : ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ ಜಿಮ್‌ ರವಿ ಈಗ ಪುರುಷೋತ್ತಮ ಚಿತ್ರದ ನಾಯಕನಾಗಿದ್ದಾರೆ. ಜಿಮ್‌ ರವಿ ಅವರು ನೂರಾರು ಬಾಡಿ ಬಿಲ್ಡಿಂಗ್‌ ಕಾಂಪಿಟೇಷನ್‌ನಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ನಲ್ಲಿಯೂ ಅವರು ಸಖತ್‌ ಸೌಂಡ್‌ ಮಾಡಿದ್ದರು. ಸಾಕಷ್ಟು ಸಿನಿಮಾಗಳಲ್ಲಿ ಫೈಟರ್‌ ಆಗಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದ ಜಿಮ್‌ ರವಿ ಈಗ ಪುರುಷೋತ್ತಮ ಸಿನಿಮಾ ಮೂಲಕ ಹೀರೋ ಆಗಿದ್ದಾರೆ.

ರವಿʼಸ್‌ ಜಿಮ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಈಗ ಸೆನ್ಸಾರ್‌ ಅಂಗಳದಲ್ಲಿದೆ. ಅಮರನಾಥ್‌ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಸದ್ಯದಲ್ಲೇ ರಿಲೀಸ್‌ಗೆ ರೆಡಿ ಇದೆ. ರವಿ ಅವರ ಜೋಡಿಯಾಗಿ ಅಪೂರ್ವ ನಟಿಸಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ನಿರ್ದೇಶನ ಸಿಕ್ಕಿರುವ ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಕುಮಾರ್ ಎಂ ಕ್ಯಾಮೆರಾ ವರ್ಕ್,ಅರ್ಜುನ್ ಕಿಟ್ಟು ಸಂಕಲನ, ಕಲೈ ನೃತ್ಯ ನಿರ್ದೇಶನ ಪುರುಷೋತ್ತಮ ಚಿತ್ರಕ್ಕಿದೆ.

ಚಿತ್ರದ ಟ್ರೈಲರ್‌ ಈ ತಿಂಗಳಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

Share Post