BengaluruCinemaNational

ನಟಿ ರಶ್ಮಿಕಾ ಮಂದಣ್ಣಗೆ 80 ಲಕ್ಷ ಮೋಸ ಮಾಡಿದ ಮ್ಯಾನೇಜರ್‌..!

ಹೈದರಾಬಾದ್‌; ನ್ಯಾಷನಲ್‌ ಕ್ರಶ್‌ ಎಂದೇ ಖ್ಯಾತಿ ಪಡೆದಿರುವ ಖ್ಯಾತ ನಟಿ ರಶ್ಮಿಕಾ ಮಂದಣ್ಣಗೆ ಸುಮಾರು 80 ಲಕ್ಷ ರೂಪಾಯಿ ಮೋಸ ಆಗಿದೆ. ರಶ್ಮಿಕಾ ಅವರ ನಂಬಿಕಸ್ತ ಮ್ಯಾನೇಜರ್‌ ಮೋಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೆಲ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಆದ್ರೆ ಇದನ್ನು ಹೊರಗೆ ತರದೇ ಸೌಹಾರ್ದಯುತವಾಗಿ ರಶ್ಮಿಕಾ ಪರಿಹರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಶ್ಮಿಕಾ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ಅವರ ವ್ಯವಹಾರಗಳನ್ನು ನೋಡಿಕೊಳ್ಳಲು ಮ್ಯಾನೇಜರ್‌ ಒಬ್ಬರನ್ನು ನೇಮಿಸಿಕೊಳ್ಳಲಾಗಿತ್ತು. ಅವರು ಅತ್ಯಂತ ನಂಬಿಕಸ್ತ ಮ್ಯಾನೇಜರ್‌ ಆಗಿದ್ದರು. ಆದರೆ ಅದೇ ವ್ಯಕ್ತಿ ರಶ್ಮಿಕಾಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ. ಆದ್ರೆ ರಶ್ಮಿಕಾ ಈ ವಿಚಾರವನ್ನಿಟ್ಟುಕೊಂಡು ರಂಪಾಟ ಮಾಡಲು ಹೋಗಿಲ್ಲ. ಬದಲಾಗಿ, ವಂಚನೆ ಮಾಡಿದ ಮ್ಯಾನೇಜರ್‌ನನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಮ್ಯಾನೇಜರ್‌ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.

ರಶ್ಮಿಕಾ ಅವರು ಸದ್ಯ, ಪುಷ್ಪ-೨ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Share Post