National

ಜಿ-20 ಶೃಂಗಸಭೆ; ದೆಹಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌

ನವದೆಹಲಿ; ನಾಳೆಯಿಂದ ದೆಹಲಿಯಲ್ಲಿ ಜಿ-೨೦ ಶೃಂಗಸಭೆ ನಡೆಯುತ್ತಿದೆ. ಈಗಾಗಲೇ ಬಹುತೇಕ ಗಣ್ಯರು ದೆಹಲಿಗೆ ಆಗಮಿಸಿದ್ದಾರೆ. ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಕೂಡಾ ದೆಹಲಿಗೆ ಬಂದಿಳಿದಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ವಿಮಾನದಿಂದ ಇಳಿಯುತ್ತಿದ್ದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಜ್ಯ ಸಚಿವ ವಿ.ಕೆ ಸಿಂಗ್ ಅವರು ಸ್ವಾಗತ ಕೋರಿದರು. ಬಳಿಕ ಅಲ್ಲೇ ಆಯೋಜನೆ ಮಾಡಲಾಗಿದ್ದ ಭಾರತೀಯ ನೃತ್ಯವನ್ನು ಕಣ್ತುಂಬಿಕೊಂಡರು. ಈ ನೃತ್ಯದ ಬಗ್ಗೆ ಸಚಿವ ವಿ.ಕೆ ಸಿಂಗ್ ಅವರು ಬೈಡನ್​ಗೆ ಮಾಹಿತಿ ನೀಡಿದರು.

Share Post