National

ಬ್ರಿಟನ್‌ ಪ್ರಧಾನಿ, ಭಾರತದ ಅಳಿಯ ರಿಷಿ ಸುನಕ್‌ಗೆ ಅದ್ದೂರಿ ಸ್ವಾಗತ

ನವದೆಹಲಿ; ಜಿ-೨೦ ಶೃಂಗಸಭೆಗೆ ದೆಹಲಿ ಸಿಂಗಾರಗೊಂಡಿದೆ. ಗಣ್ಯರೆಲ್ಲಾ ದೆಹಲಿಗೆ ಆಗಮಿಸಿದ್ದಾರೆ. ನಾಳೆಯಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ಜಿ-೨೦ ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಭಾರತದ ಅಳಿಯ ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಕೂಡಾ ಆಗಮಿಸಿದ್ದಾರೆ. ಅವರ ಪತ್ನಿ ಅಕ್ಷತಾ ಮೂರ್ತಿ ಕೂಡಾ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ. 

ಇಂದು ಮಧ್ಯಾಹ್ನ ಅವರು ದೆಹಲಿಗೆ ಬಂದಿಳಿದರು. ಈ ವೇಳೆ ಕೇಂದ್ರ ಸಚಿವ ಅಶ್ವಿನಿಕುಮಾರ್‌ ಅವರು ರಿಷಿ ಸುನಕ್‌ ಅವನ್ನು ಬರಮಾಡಿಕೊಂಡರು. ಈ ವೇಳೆ ಪಂಜಾಬಿ ಡ್ಯಾನ್ಸ್​ ಅಯೋಜನೆ ಮಾಡಲಾಗಿತ್ತು. ಇದನ್ನು ಕಣ್ತುಂಬಿಕೊಂಡ ರಿಷಿ ಸುನಕ್‌, ಕೈಬೀಸಿ ಖುಷಿ ವ್ಯಕ್ತಪಡಿಸಿದರು.

ಇದೇ ವೇಳೆ ರಿಷಿ ಪತ್ರಕರ್ತರ ಪ್ರಶ್ನೆಗಳಿಗೆ ಖುಷಿಯಿಂದ ಉತ್ತರಿಸಿದ್ದಾರೆ. ಈ ಬಾರಿಯ G-20 ಶೃಂಗಸಭೆ ನನಗೆ ತುಂಬಾ ವಿಶೇಷವಾಗಿದೆ. ಇದರಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಭಾರತದ ಅಳಿಯ, ಭಾರತಕ್ಕೆ ಬರುತ್ತಿರುವುದು ಸಂತಸದ ಸಂಗತಿ ಎಂದಿದ್ದಾರೆ.

 

 

 

Share Post