National

ಜರ್ಮನ್‌ ನೌಕಾಪಡೆಯ ಫ್ರಿಗೇಟ್ ಬೇಯರ್ನ್, ಎಫ್217 ಭಾರತಕ್ಕೆ…

ಮಹಾರಾಷ್ಟ್ರ: ಭಾರತ ಮತ್ತು ಜರ್ಮನಿ ನಡುವಿನ ನೌಕಾ ಸಂಬಂಧವನ್ನು ಬಲಪಡಿಸುವ ಜರ್ಮನ್ ನೇವಿ ಫ್ರಿಗೇಟ್ ಬೇಯರ್ನ್ ಎಫ್ 217 ಗುರುವಾರ ಮುಂಬೈಗೆ ಬಂದು ತಲುಪಿದೆ. ಯುದ್ಧನೌಕೆಯನ್ನು ಭಾರತದಲ್ಲಿನ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಮತ್ತು ಮಹಾರಾಷ್ಟ್ರ ಪ್ರೋಟೋಕಾಲ್, ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಬರಮಾಡಿಕೊಂಡರು.

ಯುದ್ದನೌಕೆ ಬಂದ ಬಳಿಕ ಬಳಿಕ ಜರ್ಮನ್‌ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಮಾತನಾಡುತ್ತಾ. ಪ್ರಪಂಚದ ಎಲ್ಲಾ 32ದೇಶಗಳು ಅಂತರರಾಷ್ಟ್ರೀಯ ಸಮುದ್ರ ಕಾನೂನನ್ನು ಗೌರವಿಸಬೇಕು. ಎಲ್ಲರಿಗೂ ಸಮುದ್ರ ಮಾರ್ಗ ವ್ಯಾಪಾರ ವಹಿವಾಟು ಉಚಿತವಾಗಿ ಸಾಗಬೇಕು ಯಾಕಂದ್ರೆ 60% ಅಂತರಾಷ್ಟ್ರೀಯ ವ್ಯಾಪಾರವು ಪೆಸಿಫಿಕ್ ಸಾಗರದ ಮೂಲಕ ನಡೆಯುತ್ತದೆ. “ಕೋವಿಡ್ ಮಧ್ಯೆ ಈ ಹಡಗನ್ನು ಇಲ್ಲಿಗೆ ತಂದು ನಿಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂಬ ನೆಮ್ಮದಿ ಇದೆ ಎಂದರು.

ಈ ನಡುವೆ ಜರ್ಮನ್ ನೌಕಾಪಡೆಯ ಮುಖ್ಯಸ್ಥ ಕೇ-ಅಚಿಮ್ ಸ್ಕೋನ್‌ಬಾಚ್ ಗುರುವಾರ ಇಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥ ಆರ್.ಹರಿಕುಮಾರ್ ಅವರನ್ನು ಭೇಟಿ ಮಾಡಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದ್ರು.

Share Post