National

ದೆಹಲಿಯ ಚಾಂದಿನಿ ಚೌಕ್‌ ಬಳಿ ಬೆಂಕಿ ದುರಂತ: 58 ಅಂಗಡಿ ಭಸ್ಮ

ನವದೆಹಲಿ: ಇಲ್ಲಿನ ಪ್ರಮುಖ ಜನನಿಬಿಡ ಪ್ರದೇಶವಾದ ಚಾಂದಿನಿ ಚೌಕ್‌ ಬಳಿಯ ಲಜಪತ್‌ ರಾಯ್‌ ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮಾರುಕಟ್ಟೆಯ 58 ಅಂಗಡಿಗಳಿಗೆ ಬೆಂಕಿ ತಗುಲಿದ್ದು, ದೊಡ್ಡ ಮಟ್ಟದಲ್ಲಿ ಬೆಂಕಿ ಆವರಿಸಿತ್ತು. ಬೆಳಗ್ಗೆಯೇ ಈ ಬೆಂಕಿ ಅನಾಹುತ ಸಂಭವಿಸಿದ್ದು ಕೋಟ್ಯಂತರ ರೂಪಾಯಿ ವಸ್ತುಗಳು ಬೆಂಕಿಗೆ ಆಹಿತಿಯಾಗಿವೆ.

ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ದೊಡ್ಡ ಮಟ್ಟದಲ್ಲಿ ವ್ಯಾಪಿಸಿತ್ತು. ಇನ್ನಷ್ಟು ಅಂಗಡಿಗಳಿಗೂ ಬೆಂಕಿ ಹರಡುವ ಅಪಾಯವಿತ್ತು. ಆದರೆ ಸೂಕ್ತ ಸಮಯದಲ್ಲಿ 12 ಅಗ್ನಿಶಾಮಕ ವಾಹನಗಳು ಆಗಮಿಸಿದ್ದರಿಂದ ಬೆಂಕಿ ಬೇರೆಡೆ ವ್ಯಾಪಿಸದಂತೆ ತಡೆಯಲಾಯಿತು. ಚಾಂದಿನಿ ಚೌಕ್‌ ಪ್ರದೇಶದಲ್ಲಿ ಅಂಗಡಿಗಳು, ಬಸ್‌ ನಿಲ್ದಾಣ ಸೇರಿದಂತೆ ಹಲವು ವಾಣಿಜ್ಯ ಚಟುವಟಿಕೆಗಳು ನಡೆಯುತ್ತವೆ. ಇಂತಹ ಪ್ರದೇಶದಲ್ಲಿ ಬೆಂಕಿ ದುರ್ಘಟನೆ ನಡೆದಿದೆ.

ಆದರೆ ಅಗ್ನಿಶಾಮಕ ಸಿಬ್ಬಂದಿ ಬಹುಬೇಗ ಸ್ಥಳಕ್ಕೆ ಬಂದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಯಾವುದೇ ಸಾವುನೋವಿನ ಬಗ್ಗೆಯೂ ವರದಿಯಾಗಿಲ್ಲ.

Share Post