ಬುಲ್ಲಿ ಬಾಯಿ : ಆಪ್ ಸೃಷ್ಟಿಕರ್ತ ನಾನೇ, ಅಮಾಯಕರನ್ನು ಬಿಟ್ಟುಬಿಡಿ
ಮುಂಬೈ : ಸಾಕಷ್ಟು ಚರ್ಚೆಗಳನ್ನು ಹುಟ್ಟಿಹಾಕಿರುವ ಬುಲ್ಲಿ ಬಾಯಿ ಆಪ್ ಸಂಬಂಧಿಸಿದ ತನಿಖೆ ಚುರುಕುಗೊಂಡ ಬೆನ್ನಲ್ಲೇ, ಕಹಾನಿ ಮೇ ಟ್ವಿಸ್ಟ್ ಒಂದು ಸಿಕ್ಕಿದೆ. “ಬುಲ್ಲಿ ಬಾಯಿ ಆಪ್ ಸೃಷ್ಟಿಕರ್ತ ನಾನೇ, ನೀವು ರಾಂಗ್ ಪೀಪಲ್‌ನ ಹಿಡಿದಿದ್ದೀರ. ಅಮಾಯಕರನ್ನು ಬಿಟ್ಟು ಬಿಡಿ” ಎಂದು ಅನಾಮಧೇಯ ಟ್ವೀಟ್ ಒಂದು ಬುಧವಾರದಿಂದ ಹರಿದಾಡುತ್ತಿದೆ.
You have arrested the wrong person, slumbai police
I am the creator of #BulliBaiApp
Got nothing to do with the two innocents whom u arrested, release them asap mf https://t.co/QJA078wSnH pic.twitter.com/ycbDuc7cNS
— . (@giyu44) January 5, 2022
ಮುಂಬೈ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದರು. 100 ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರ ಇಟ್ಟುಕೊಂಡು ಆಪ್ ಮೂಲಕ ಅವರನ್ನು ಹರಾಜಿಗಿಡಲಾಗಿದೆ ಎಂಬ ದೂರು ಸ್ವೀಕರಿಸಿದ ಪೊಲೀಸರು ಈ ತನಿಖೆ ಶುರು ಮಾಡಿದ್ದರು.
ಸರಣಿ ಟ್ವೀಟ್ ಮಾಡಿರುವ ಅನಾಮಿಕ , ನಾನು ಇದನ್ನು ಶುರು ಮಾಡಿದಾಗ ಮುಂದೇನಾಗುತ್ತೆ ಎಂಬ ಅರಿವು ಇರಲಿಲಲ್ಲ, ಹೀಗಾಗಿ ನಾನು ನನ್ನ ಸ್ನೇಹಿತರಾದ ವಿಶಾಲ್ ಮತ್ತು ಸ್ವಾತಿಯವರ ಅಕೌಂಟ್ ಬಳಸಿದ್ದೇನೆ. ಅವರಿಗೆ ಇದರ ಬಗ್ಗೆ ಏನು ಗೊತ್ತಿಲ್. ಈಗ ಅವರು ಬಂಧಿಯಾಗಿದ್ದಾರೆ. ಎಂದು ಬರೆದುಕೊಂಡಿದ್ದಾನೆ.
ಸರಣಿ ಟ್ವೀಟ್‌ಗಳನ್ನು ಪರಿಗಣಿಸಿರುವ ಮುಂಬೈ ಪೊಲೀಸರು ಅನಾಮಿಕನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.