National

ಅಮೃತಸರದಲ್ಲಿ ಭೂಕಂಪನ; ರಿಕ್ಟರ್‌ ಮಾಪಕದಲ್ಲಿ 4.1 ತೀವ್ರತೆ ದಾಖಲು

ಚಂಡೀಗಢ; ಇತ್ತೀಚೆಗೆ ಉತ್ತರ ಭಾರತದಲ್ಲಿ ಭೂಕಂಪನಗಳು ಹೆಚ್ಚಾಗುತ್ತಿವೆ. ದೆಹಲಿ ಸುತ್ತಮುತ್ತ, ನೇಪಾಳ ಸುತ್ತಮುತ್ತ ಭೂಮಿ ನಡುಗುವ ಘಟನೆಗಳು ನಡೆಯುತ್ತಿವೆ. ಇದೀಗ ಇಂದು ಮುಂಜಾನೆ ಪಂಜಾಬ್‌ನ ಅಮೃತಸರದಲ್ಲಿ ಭೂಮಿ ನಡುಗಿದೆ. 

ರಿಕ್ಟರ್‌ ಮಾಪಕದಲ್ಲಿ  4.1 ತೀವ್ರರೆ ದಾಖಲಾಗಿದ್ದು, ಸ್ಥಳೀಯರು ಆತಂಕ್ಕೊಳಗಾಗಿದ್ದಾರೆ.  ಇಂದು ಮುಂಜಾನೆ 3:42ರ ಸುಮಾರಿಗೆ ಭೂಮಿ ಕಂಪಿಸಿದ್ದು, ಅದರ ಕೇಂದ್ರ ಬಿಂದುವನ್ನು ನೆಲದಿಂದ 120 ಕಿ.ಮೀ ಆಳದಲ್ಲಿದೆ. ಕಳೆದ ಕೆಲ ದಿನಗಳಿಂದ ಉತ್ತರ ಭಾರತದಾದ್ಯಂತ ಒಂದಾದ ಮೇಲೊಂದರಂತೆ ಭೂಕಂಪಗಳು ಸಂಭವಿಸುತ್ತಲೇ ಇದೆ. ಇದರಿಂದ ಜನರಲ್ಲಿ ಆತಂಕ ಮೂಡಿದೆ. ಭಾನುವಾರ ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿತ್ತು. ನ್ಯೂ ತೆಹ್ರಿ, ಪಿಥೋರಗಢ, ಬಾಗೇಶ್ವರ್, ಪೌರಿ ಹಾಗೂ ಇತರ ನಗರಗಳು ಸೇರಿದಂತೆ ಉತ್ತರಾಖಂಡದ ಕೆಲ ಭಾಗಗಳಲ್ಲಿ ಕಂಪನದ ಅನುಭವವಾಗಿದೆ.

Share Post