National

Indian army:ಹಿಮಪಾತದಲ್ಲಿ ಸಲಿಕಿದ್ದ ಏಳು ಯೋಧರು ಹುತಾತ್ಮ, ರಕ್ಷಣಾ ಸಚಿವ ಸಂತಾಪ

ಅರುಣಾಚಲ ಪ್ರದೇಶ:  ಕಮೆಂಗ್(Kameng sector) ಸೆಕ್ಟರ್‌ನಲ್ಲಿ ಹಿಮಕುಸಿತದಲ್ಲಿ ಸಿಲುಕಿದ್ದ ಭಾರತೀಯ ಯೋಧರು ಶವವಾಗಿ ಪತ್ತೆಯಾಗಿದ್ದಾರೆ.  ಕಮೆಂಗ್‌ ಸೆಕ್ಟರ್‌ನಲ್ಲಿ ಗಸ್ತು ತಿರುಗುತ್ತಿದ್ದ ಏಳು ಸೇನಾ ಸಿಬ್ಬಂದು ಹಿಮಪಾತದಲ್ಲಿ ಸಿಲುಕಿದ್ರು. ರಕ್ಷಣಾ ಕಾರ್ಯಾಚರಣೆ ವೇಳೆ ಏಳು ಸಿಬ್ಬಂದಿಯನ್ನು ಹೊರತೆಗೆಯಲಾಗಿದೆ ಆದರೆ ಎಲ್ಲರೂ ಹುತಾತ್ಮರಾಗಿರುವುದಾಗಿ ಭಾರತೀಯ ಸೇನೆ ತಿಳಿಸಿದೆ.

ಈಸ್ಟರ್ನ್ ಕಮಾಂಡ್(eastern command) ಏಳು ಸೈನಿಕರು ಹೆಸರನ್ನು ಬಹಿರಂಗಪಡಿಸಿದ್ದು, ಹವ್ ಜುಗಲ್ ಕಿಶೋರ್, ಆರ್‌ಎಫ್‌ಎನ್ ಅರುಣ್ ಕಟ್ಟಾಲ್, ಆರ್‌ಎಫ್‌ಎನ್ ಅಕ್ಷಯ್ ಪಠಾನಿಯಾ, ಆರ್‌ಎಫ್‌ಎನ್ ವಿಶಾಲ್ ಶರ್ಮಾ, ಆರ್‌ಎಫ್‌ಎನ್ ರಾಕೇಶ್ ಸಿಂಗ್, ಆರ್‌ಎಫ್‌ಎನ್ ಅಂಕೇಶ್ ಭಾರದ್ವಾಜ್ ಮತ್ತು ಜನರಲ್ ಗುರ್ಬಾಜ್ ಸಿಂಗ್ ಎಂದು ಗುರುತಿಸಲಾಗಿದೆ.

ಸೇನಾ ಸಿಬ್ಬಂದಿಯ ಸಾವಿಗೆ ಕೇಂದ್ರ ರಕ್ಷಣಾ ಸಚಿವ(Defence minister) ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.”ಅರುಣಾಚಲ ಪ್ರದೇಶದ ಕೆಮಾಂಗ್ ಸೆಕ್ಟರ್‌ನಲ್ಲಿ ಹಿಮಪಾತಕ್ಕೆ ಬಲಿಯಾದ ಭಾರತೀಯ ಸೇನೆಯ ಸಿಬ್ಬಂದಿಯ ನಿಧನದಿಂದ ತೀವ್ರ ನೋವಾಗಿದೆ. ಈ ವೀರ ಸೈನಿಕರು ದೇಶ ಸೇವೆ ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಧೈರ್ಯ ಮತ್ತು ಸೇವೆಗೆ ನಾನು ನಮನ ಸಲ್ಲಿಸುತ್ತೇನೆ. ಅಗಲಿದ ಯೋಧರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ(Modi) ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್(Ramanath covind) ಕೂಡ ಯೋಧರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದೇಶಕ್ಕೆ ಅವರ “ಸ್ಮರಣಾರ್ಥ ” ಸೇವೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ರು

 

Share Post