ಸಣ್ಣ ವಿಚಾರಕ್ಕಾಗಿ ಮಕ್ಕಳ ಜೊತೆ ತಾಯಿಯೂ ಆತ್ಮಹತ್ಯೆ
ದೊಡ್ಡಬಳ್ಳಾಪುರ: ಗಂಡ- ಹೆಂಡತಿಯರ ಜಗಳ ಊಟ ಮಾಡುವರೆಗೂ ಅಷ್ಟೇ ಅಂತಾ ನಾವೇಲ್ಲ ಗಾಧೆ ಮಾತುಗಳನ್ನು ಕೇಳಿದ್ದೇವೆ. ಅವರ ನಡುವೆ ಸಣ್ಣ ಸಣ್ಣ ವಿಚಾರಕ್ಕೆ ಜಗಳವಾಡಿ ಜೀವನ ಸರಿ ಮಾಡಿಕೊಳ್ಳುವುದು ಸಹಜ. ಅದರೆ ಇಲ್ಲೊಂದು ಗ್ರಾಮದಲ್ಲಿ ಸಣ್ಣ ವಿಚಾರಕ್ಕೆ ಮುನಿಸಿಕೊಂಡು ಮಕ್ಕಳ ಜೊತೆ ತನ್ನ ಜೀವವೇ ತೆಗೆದುಕೊಂಡಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಸ್ ಎಂ ಗೊಲ್ಲಹಳ್ಳಿಯಲ್ಲಿ ತನ್ನ ಗಂಡ ಊಟಕ್ಕೆ ಹೊರಗೆ ಕರೆದಿಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ತನ್ನ ಮಕ್ಕಳ ಜೊತೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮನೆಯಲ್ಲಿ ಯಾರ ಇಲ್ಲದ ವೇಳೆ ಸಂಧ್ಯಾ ತನ್ನ ಮಕ್ಕಳಾದ ಕುಸುಮಾ ಮತ್ತು ರೋಹಿತ್ ಜೊತೆ ಪೆಟ್ರೋಲ್ ಬಂಕ್ ಹೋಗಿ ಪೆಟ್ರೋಲ್ ತಂದು ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿದ್ದ ಅತ್ತೆ ಮಾವ ಇಬ್ಬರು ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಸೋಸೆ ಈ ರೀತಿ ಕೆಲಸ ಮಾಡಿಕೊಂಡಿದ್ದಾಳೆ. ಇದನ್ನು ಗಮನಿಸಿದ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅಷ್ಟು ಹೊತ್ತಿಗೆ ದೇಹ ಸುಟ್ಟು ಬೆಂದು ಹೋಗಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಸಂಬಂಧಿಸಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.