National

ಸಿನಿಮಾ ಹಾಲ್‌ ಸುಟ್ಟು ಬೂದಿ: ಪ್ರಾಣಾಪಾಯದಿಂದ ಪಾರಾದ ಜನ

ಕೊಲ್ಕತ್ತಾ:   ಪಾರ್ಕ್‌ ಶೋ ಸಿನಿಮಾ ಹಾಲ್‌ನಲ್ಲಿ ಅಗ್ನಿ ದುರಂತ ಸಂಭವಿಸಿದ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡದ್ದಾರೆ.  ಸ್ಥಳಕ್ಕೆ 4/5ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಕಟ್ಟಡ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಹಾಲ್‌ನಲ್ಲಿದ್ದ ಪೀಠೋಪಕರಣ, ಇತ್ಯಾದಿ ವಸ್ತುಗಳು ಬೂದಿಯಾಗಿವೆ.

ಬೆಂಕಿ  ದುರಂತದಲ್ಲಿ ಯಾರಿಗೂ ಯಾವುದೇ ರೀತಿ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆ ಸಂಬಂಧ ಬೆನಿಯಾಪುಕೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಆದ್ರೆ ಇದುವರೆಗೂ ಅಗ್ನಿ ದುರಂತಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Share Post