ಬಾವನಿಂದ ಅತ್ಯಾಚಾರ; ನೀನು ಹೆಂಡತಿಯಲ್ಲ ಅತ್ತಿಗೆ ಎಂದ ಗಂಡ!
ಲಖನೌ; ಮಹಿಳೆಯೊಬ್ಬಳ ಮೇಲೆ ಸ್ವಂತ ಭಾವನೇ ಅತ್ಯಾಚಾರ ಎಸಗಿದ್ದಾನೆ.. ಇದನ್ನು ಗಂಡನಿಗೆ ಹೇಳಿದರೆ ಇನ್ಮೇಲೆ ʻನೀನು ನನ್ನ ಹೆಂಡತಿಯಲ್ಲ ಅತ್ತಿಗೆʼ ಎಂದು ಹೇಳಿಬಿಟ್ಟಿದ್ದಾನೆ.. ಸಾಲದೆಂಬಂತೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ..
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದೆ.. ಏಪ್ರಿಲ್ 2 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಏಪ್ರಿಲ್ 2ರಂದು ಮಹಿಳೆಯ ಮೇಲೆ ತನ್ನ ಬಾವ ಅತ್ಯಾಚಾರ ಮಾಡಿದ್ದಾನೆ.. ಇದರಿಂದ ನೊಂದ ಮಹಿಳೆ ಈ ವಿಚಾರವನ್ನು ತನ್ನ ಗಂಡನಿಗೆ ತಿಳಿಸಿದ್ದಾಳೆ.. ಇದರಿಂದ ಆಕ್ರೋಶಗೊಳ್ಳಬೇಕಿದ್ದ ಗಂಡ, ತನ್ನ ಪತ್ನಿಯನ್ನೇ ದಂಡಿಸಿದ್ದಾನೆ.. ಇನ್ನ ಮೇಲೆ ನೀವು ನನ್ನ ಹೆಂಡತಿಯೇ ಅಲ್ಲ, ಅತ್ತಿಗೆ ಎಂದು ಕರೆದಿದ್ದಾನೆ..
ಸಾಲದೆಂಬಂತೆ ಮಾರನೆಯ ದಿನ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ.. ಇನ್ನು ಅತ್ಯಾಚಾರ ಎಸಗಿದ ಬಾವಿ ಆ ದೃಶ್ಯಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.. ಕೊನೆಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತನ್ನ ಗೋಳು ತೋಡಿಕೊಂಡಿದ್ದಾಳೆ.. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದು, ಆರೋಪಿಗಳ ವಿರುದ್ಧ, ಐಪಿಸಿ ಸೆಕ್ಷನ್ 376, 307, 328 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.