HealthNational

ಕ್ಯಾನ್ಸರ್‌ ಬರದಂತೆ ತಡೆಯಲು ಬಂದಿದೆ ಲಸಿಕೆ!

ನವದೆಹಲಿ; ಕ್ಯಾನ್ಸರ್‌ ಬರದಂತೆ ತಡೆಯಲು ಲಸಿಕೆಯೊಂದನ್ನು ಕಂಡುಹಿಡಿಯಲಾಗಿದೆ.. ಮಡರ್ನಾ ಫಾರ್ಮಾಸಿಟುಕಲ್ಸ್‌ ಕಂಪನಿ ಈ ಲಸಿಕೆ ಪರಿಚಯಿಸಿದೆ.. ಇದರಿಂದಾಗಿ ಕ್ಯಾನ್ಸರ್‌ ಬರದಂತೆ ತಡೆಯಲು ಸಹಕಾರಿಯಾಗಿದ್ದು, ಜನರು ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಬಹುದಾಗಿದೆ ಎಂದು ಹೇಳಲಾಗುತ್ತಿದೆ.. ವೈದ್ಯ ಜಗತ್ತಿನಲ್ಲಿ ಇದೊಂದು ಹೊಸ ಮೈಲುಗಲ್ಲು ಎಂದೇ ಹೇಳಲಾಗುತ್ತಿದೆ..
ಕ್ಯಾನ್ಸರ್‌ನಿಂದಾಗಿ ಲಕ್ಷಾಂತರ ಜನ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ.. ಯಾರಿಗೆ ಯಾವಾಗ ಕ್ಯಾನ್ಸರ್‌ ಬರುತ್ತದೋ ಗೊತ್ತಿಲ್ಲ.. ಜೊತೆಗೆ ಕ್ಯಾನ್ಸರ್‌ ಚಿಕಿತ್ಸೆ ದುಬಾರಿ.. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ಬರದಂತೆ ತಡೆಯುವ ಲಸಿಕೆ ಬರುತ್ತಿರುವುದು ವೈದ್ಯಲೋಕದ ಹೊಸ ಆಶಾಭಾವನೆ ಎಂದೇ ಹೇಳಬಹುದು..
ಕೋವಿಡ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಬಳಸಲಾದ mRNA ತಂತ್ರಜ್ಞಾನವನ್ನೇ ಇದರಲ್ಲೂ ಬಳಸಲಾಗಿದೆ.. ಇದಕ್ಕೆ mRNA-4359 ಎದು ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ.. ದೊಡ್ಡ ಮಟ್ಟದ ಟ್ಯೂಮರ್‌ ಹೊಂದಿದ್ದ 19 ಮಂದಿ ಹಾಗೂ ಈಗಷ್ಟೇ ಟ್ಯೂಮರ್‌ ವೃದ್ಧಿಯಾಗುತ್ತಿದ್ದ 8 ರೋಗಿಗಳ ಮೇಲೆ ಈ ಲಸಿಕೆ ಪ್ರಯೋಗ ಮಾಡಲಾಗಿತ್ತು..  ಇವರಿಗೆ ಯಾವುದೇ ಅಡ್ಡಪರಿಣಾಮ ಇಲ್ಲದೆ ಉತ್ತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ..

ಮಾನಸಿಕ ಒತ್ತಡ ನಿವಾರಣೆಗೆ ಸ್ಲೀಪ್‌ ಟೂರಿಸಂ ಮದ್ದು!
ಬೆಂಗಳೂರು; ಈ ಬ್ಯುಸಿ ಲೈಫ್‌ನಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.. ಇದರಿಂದಾಗಿ ಎಷ್ಟೋ ಜನಕ್ಕೆ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರುತ್ತಿಲ್ಲ.. ನಿದ್ದೆ ಬರದ ಕಾರಣಕ್ಕಾಗಿ ಹಲವಾರು ಕಾಯಲೆಗಳಿಗೆ ಕಾರಣವಾಗುತ್ತಿದೆ.. ಹೀಗಾಗಿ ನಿದ್ದೆ ಮಾಡೋದಕ್ಕೂ ಜನ ಪ್ರವಾಸ ಹೋಗಬೇಕಾದಂತಹ ಪರಿಸ್ಥಿತಿ.. ಪ್ರವಾಸ ಅಂದ್ರೆ, ಸುತ್ತಾಡೋದಕ್ಕೆ, ಸ್ವಚ್ಛಂಧ ಸ್ಥಳಗಳನ್ನು ನೋಡೋದಕ್ಕೆ ಹೋಗುತ್ತೇವೆ.. ಆದ್ರೆ ಈಗ ಸ್ಲೀಪ್‌ ಟೂರಿಸಂ ಹೆಚ್ಚು ಜನಪ್ರಿಯವಾಗುತ್ತಿದೆ.. ಇದರ ಮುಖ್ಯ ಉದ್ದೇಶ ಹಚ್ಚಹಸಿರಿನ ಪರಿಸರದಲ್ಲಿ ನಿಶ್ಚಿಂತೆಯಿಂದ ನಿದ್ದೆ ಮಾಡುವುದು. ಈ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು.
ಮನೆಯಲ್ಲಿ ಸರಿಯಾಗಿ ನಿದ್ದೆ ಮಾಡಲಾಗದವರು ರಜೆಯ ಸಮಯದಲ್ಲಿ ನಿಸರ್ಗದ ಮಡಿಲಲ್ಲಿ ಸುಖನಿದ್ರೆ ಮಾಡಲು ಹೋಗುವುದೇ ಸ್ಲೀಪ್‌ ಟೂರಿಸಂ.. ಇದೀಗ ಇಂತಹದ್ದೊಂದು ಟ್ರೆಂಡಿಂಗ್‌ ಶುರುವಾಗಿದೆ.. ಇದು ನಿಮ್ಮನ್ನು ರೀಚಾರ್ಜ್ ಮಾಡಲು ಒಂದು ಮಾರ್ಗವಾಗಿದೆ. ಈ ರೀತಿಯಾಗಿ ನೀವು ಬಿಡುವಿಲ್ಲದ ಕೆಲಸದ ನಡುವೆ ನಿಮ್ಮ ಜೀವನದಲ್ಲಿ ಸ್ವಲ್ಪ ಸಮಯವನ್ನು ಸುಖವಾಗಿ ಕಳೆಯಬಹುದು. ನಿದ್ರೆ ಯಾರ ಮನಸ್ಸನ್ನು ಬೇಕಾದರೂ ಬಹುಬೇಗ ಶಾಂತಗೊಳಿಸುತ್ತದೆ. ಇದರ ಜೊತೆಗೆ ಮಾನಸಿಕ ಆರೋಗ್ಯ ಕೂಡಾ ಸುಧಾರಿಸುತ್ತದೆ..
ಈ ರೀತಿಯ ಸ್ಲೀಪ್‌ ಟೂರಿಸಂನಲ್ಲಿ ಈಜು, ಟ್ರೆಕ್ಕಿಂಗ್, ಪಾರ್ಲರ್ ಸೆಷನ್, ಯೋಗ ಜೊತೆಗೆ ಮಲಗುವ ವಾತಾವರಣವಿರುತ್ತದೆ.. ಉತ್ತನ ನೈಸರ್ಗಿಕ ಗಾಳಿಯ ಅಸ್ವಾದಿಸುತ್ತಾ ಎಲ್ಲಾ ಜಂಜಾಟಗಳನ್ನು ಮರೆತು ಆಗಾಗ ಕೆಲ ದಿನ ಕಣ್ತುಂಬಾ ನಿದ್ದೆ ಮಾಡಿ ಬಂದರೆ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು.. ರಿಶಿಕೇಶ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಹಲವು ಸ್ಥಳಗಳು ಈ ಸ್ಲೀಪ್‌ ಟೂರಿಸಂಗೆ ಸೂಕ್ತವಾಗಿದೆ..
70 ವರ್ಷದ ಪಿತ್ತಕೋಶದಲ್ಲಿ 6110 ಕಲ್ಲುಗಳು ಪತ್ತೆ!
ಕೋಟಾ(ರಾಜಸ್ಥಾನ); 70 ವರ್ಷದ ವೃದ್ಧನ ಪಿತ್ತಕೋಶದಲ್ಲಿ 6110 ಕಲ್ಲುಗಳು ಕಂಡುಬಂದಿದ್ದು, ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಅವುಗಳನ್ನು ಹೊರತೆಗೆದಿದ್ದಾರೆ.. ರಾಜಸ್ಥಾನದ ಕೋಟಾದ ಖಾಸಗಿ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದವರಾಗಿದ್ದಾರೆ.. ಇದಕ್ಕಾಗಿ ಅವರು ಒಟ್ಟು 6 ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ್ದಾರೆ..
ಬುಂಡಿ ಜಿಲ್ಲೆಯ ಪದಾಂಪುರದ 70 ವರ್ಷದ ವೃದ್ಧ ಹೊಟ್ಟೆನೋವು, ಗ್ಯಾಸ್ಟ್ರಿಕ್‌, ಹೊಟ್ಟೆಯುಬ್ಬರ, ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದ.. ಕಳೆದ 18 ತಿಂಗಳಿಂದ ವೃದ್ಧ ತೀವ್ರ ಅನಾರೋಗ್ಯಕ್ಕೀಡಾಗಿದ್ದ.. ಈ ಮೊದಲು ಆತ ಕೋಟಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.. ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ವೃದ್ಧನ ಪಿತ್ತಕೋಶದಲ್ಲಿ ಕಲ್ಲುಗಳು ಇದ್ದುದು ಕಂಡುಬಂದಿದೆ.. ಕೂಡಲೇ ಶಸ್ತ್ರಚಿಕಿತ್ಸೆಗೆ ವೈದ್ಯರು ನಿರ್ಧಾರ ಮಾಡಿದ್ದಾರೆ.. ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ದಿನೇಶ್ ಕುಮಾರ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ..

Share Post