Bengaluru

ಹೊಸ ಕೋರ್ಸ್‌ಗೆ ಆಗ್ರಹ; ಸಿಎಂ ಕಚೇರಿ ಬಳಿ ರೇವಣ್ಣ ಧರಣಿ

ಬೆಂಗಳೂರು: ಹೊಳೆನರಸೀಪುರ ಸರ್ಕಾರಿ ಕಾಲೇಜಿನಲ್ಲಿ ಹೊಸ ಕೋರ್ಸ್‌ಗಳಿಗಾಗಿ ಆಗ್ರಹಿಸಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಸಿಎಂ ಗೃಹಕಚೇರಿ ಕೃಷ್ಣಾ ಆವರಣದಲ್ಲಿ ಏಕಾಂಗಿ ಧರಣಿ ನಡೆಸಿದ ಘಟನೆ ನಡೆದಿದೆ. ಹೊಳೆನರಸೀಪುರದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಎಂಎಸ್‍ಸಿ ಸೈಕಾಲಜಿ ಹಾಗೂ ಫುಡ್-ನ್ಯೂಟ್ರೀಷಿಯನ್ ಕೋರ್ಸ್‍ಗಳ ಆರಂಭ ಮಾಡಬೇಕೆಂದು ಮನವಿ ಮಾಡಿದ್ದೆವು. ಆದ್ರೆ ಅದಕ್ಕೆ ಅನುಮತಿ ನೀಡಿಲ್ಲ ಎಂಬುದು ರೇವಣ್ಣ ಅವರ ಆರೋಪ.

2022-23ನೆ ಶೈಕ್ಷಣಿಕ ಸಾಲಿನಲ್ಲಿ ಈ ಎರಡು ಹೊಸ ಕೋರ್ಸ್‍ಗಳ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಬೇಕು. ಇದ್ರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ರೇವಣ್ಣ ಹೇಳಿದರು. ಇನ್ನು ಈ ಬಗ್ಗೆ ರೇವಣ್ಣ ಸಿಎಂಗೆ ಪತ್ರ ಬರೆದಿದ್ದು, ಈ ಕೋರ್ಸ್‌ ಆರಂಭ ಮಾಡಿದರೆ, ಉಪನ್ಯಾಸಕರಿಗೆ ತಗುಲುವ ವೇತನ ವೆಚ್ಚವನ್ನು ತಾತ್ಕಾಲಿಕವಾಗಿ ಸಿಡಿಸಿ ಸಮಿತಿ ಅಥವಾ ಸ್ವಂತ ಖರ್ಚಿನಲ್ಲಿ ಭರಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

 

Share Post