ಅಪಘಾತದಲ್ಲಿ ಶಾಲಾ ಬಾಲಕ ಬಲಿ; ಪಶ್ಚಿಮ ಮಿಡ್ನಾಪುರ ಉದ್ವಿಗ್ನ
ಪಶ್ಚಿಮ ಬಂಗಾಳ: ರಸ್ತೆ ಅಪಘಾತದಲ್ಲಿ ಶಾಲಾ ಬಾಲಕ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡು ಗ್ರಾಮಸ್ಥರು, ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಚಂದ್ರಕೋನಾ ಗೋಪ್ಸಾಯಿ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಪೊಲೀಸರು ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
ಶಾಲಾ ವಿದ್ಯಾರ್ಥಿಗಳ ಸಾವಿಗೆ ಶಾಲಾ ಶಿಕ್ಷಕರ ನಿರ್ಲಕ್ಷ್ಯ ಹಾಗೂ ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಈ ಭಾಗದ ಜನರು ದೂರಿದ್ದಾರೆ. ನಿನ್ನೆ ಮಧ್ಯಾಹ್ನ ಒಂದನೇ ತರಗತಿ ವಿದ್ಯಾರ್ಥಿ ಶುಭ್‌ಜಿತ್ ಏಕಾಏಕಿ ಶಾಲೆಯಿಂದ ಹೊರಗೆ ಬಂದಿದ್ದಾನೆ. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಇದ್ದರೂ ರಸ್ತೆಯಲ್ಲಿ ಹಂಪ್ಸ್‌ಗ ಹಾಕಿಲ್ಲ. ಪೊಲೀಸ್ ಬ್ಯಾರಿಕೇಡ್ ಕೂಡಾ ಹಾಕಿಲ್ಲ. ಇನ್ನು ಶಾಲಾ ಸಿಬ್ಬಂದಿ ಮಗುವನ್ನು ಹೊರಗೆ ಹೇಗೆ ಬಿಟ್ಟರು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದಾಗಿ ನೂರಾರು ಪೊಲೀಸರು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸಪಡಬೇಕಾಯಿತು.