Bengaluru

ಪಂಜರದಲ್ಲಿದ್ದ ಡಿಕೆಶಿಗೆ ಮುಕ್ತಿ: ವಿದೇಶಕ್ಕೆ ತೆರಳಲು ಹಾಗೂ ಪಾಸ್‌ಪೋರ್ಟ್‌ ನವೀಕರಣಕ್ಕೆ ಕೋರ್ಟ್‌ ಷರತ್ತುಬದ್ಧ ಅನುಮತಿ

ಬೆಂಗಳೂರು: ದೆಹಲಿಯಲ್ಲರುವ ಡಿ.ಕೆ.ಶಿವಕುಮಾರ್‌ ನಿವಾಸದ ಮೇಲಿನ ಐಟಿ ದಾಳಿ ನಡೆದ ಪ್ರಕರಣ ಬಳಿಕ ನ್ಯಾಯಾಲಯದ ಅನುಮತಿಯಿಲ್ಲದೆ ಎಲ್ಲಿಗೂ ಹೋಗದಂತೆ ಇಡಿ ವಿಶೇಷ ನ್ಯಾಯಾಲಯ ಆದೇಶ ಮಾಡಿತ್ತು. ಅದರಂತೆ ದಾಳಿ ಬಳಿಕ ಡಿ.ಕೆ.ಶಿವಕುಮಾರ್‌ ದೇಶ ಬಿಟ್ಟು ಎಲ್ಲಿಯೂ ಹೋಗಿರಲಿಲ್ಲ ಇದೀಗ ದುಬೈಗೆ ತೆರಳಲು ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ದುಬೈನ ಎಕ್ಸ್‌ಪೋನಲ್ಲಿ ಭಾಗಿಯಾಗಲು LPFLEX ಬೇಸ್‌ ಕಂಪನಿ ಆಹ್ವಾನ ಮಾಡಿದೆ. ವಿಶೇಷ ಅತಿಥಿಯಾಗಿ ನನ್ನನ್ನು ಆಹ್ವಾನ ಮಾಡಿದೆ ಹಾಗಾಗಿ ಅವರ ಆಹ್ವಾನದ ಮೇರೆಗೆ ನಾನು ದುಬೈಗೆ ತೆರಳಬೇಕಿದೆ. ಮಾರ್ಚ್‌ 28ರಿಂದ ಏಪ್ರಿಲ್ 3ರವರೆಗೆ ದುಬೈಗೆ ತೆರಳು ಅನುಮತಿ ನೀಡಿ ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ.

ಇದರ ಜೊತೆಗೆ ಪಾಸ್‌ಪೋರ್ಟ್‌ ನವೀಕರಣಕ್ಕೂ ಡಿಕೆಶಿ ಅನುಮತಿ ಕೇಳಿದ್ದಾರೆ. 2021 ಸಪ್ಟೆಂಬರ್ 22ಕ್ಕೆ ಪಾಸ್‌ಪೋರ್ಟ್‌ ಅವಧಿ ಮುಕ್ತಾಯವಾಗಿದೆ ಹೀಗಾಗಗಿ ಪಾಸ್‌ಪೋರ್ಟ್‌ ನವೀಕರಣಕ್ಕೂ ಅನುಮತಿ ಸಲ್ಲಿಸಿದ್ದಾರೆ. ಅರ್ಜಿಗಳಿಗೆ ಸಂಬಂಧಿಸಿದಂತೆ ಬಿಗ್‌ ರಿಲೀಫ್‌ ದೊರೆತಿದೆ.  ಡಿ.ಕೆ.ಶಿವಕುಮಾರ್‌ ಸಲ್ಲಿಸಿದ ಎರಡೂ ಅರ್ಜಿಗಳಿಗೂ ನ್ಯಾಯಾಲಯ ಸಮ್ಮತಿ ಸೂಚಿಸಿದ್ದು, ಒಂದು ಷರತ್ತನ್ನು ವಿಧಿಸಿದೆ. ಏಪ್ರಿಲ್‌ 22ರಂದು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ. ವಿಚಾರಣೆಗೆ ಹಾಜರಾಗಿ ನಂತರ ಹೋಗುವಂತೆ ಕೋರ್ಟ್‌ ಅನುಮತಿ ನೀಡಿದೆ.

Share Post