CrimeNational

ಯುವತಿ ಮೇಲೆ ಅತ್ಯಾಚಾರ ಮಾಡಿ ಕೊಂದ ಪೊಲೀಸ್‌ ಪೇದೆ!

ಆಗ್ರಾ; ಪೊಲೀಸರು ಜನರಿಗೆ ರಕ್ಷಣೆ ಕೊಡಬೇಕು. ಆದ್ರೆ ಇಲ್ಲಿ ಪೊಲೀಸ್‌ ಪೇದೆಯೊಬ್ಬ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಂದಿದ್ದಾನೆ. ಇಂತಹ ಪೈಶಾಚಿಕ ಕೃತ್ಯ ಎಸಗಿರೋದು ಆಗ್ರಾದಲ್ಲಿ.

ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆಗ್ರಾ ಪೊಲೀಸರು ಪೊಲೀಸ್‌ ಕಾನ್ಸ್‌ಟೇಬಲ್‌ ರಾಘವೇಂದ್ರ ಸಿಂಗ್‌ ಎಂಬಾತನನ್ನು ಬಂಧಿಸಿದ್ದಾರೆ. ಗುರುಗ್ರಾಮ್‌ನ ಕಿಡ್ನಿ ಕೇಂದ್ರದಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಈಕೆಗೆ ಆರೋಪಿ ರಾಘವೇಂದ್ರ ಸಿಂಗ್‌ ಪರಿಚಯವಿದ್ದ ಎಂದು ತಿಳಿದುಬಂದಿದೆ.

ಆರೋಪಿ ರಾಘವೇಂದ್ರ ಸಿಂಗ್‌ ನ ಬಾಡಿಗೆ ಕೋಣೆಯಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇಬ್ಬರೂ ಪರಿಚಯಸ್ಥರಾಗಿದ್ದು, ಝಾನ್ಸಿಯಲ್ಲಿ ಒಟ್ಟಿಗೆ ನರ್ಸಿಂಗ್ ತರಬೇತಿ ಪಡೆದಿದ್ದರು ಎನ್ನಲಾಗಿದೆ.

 

Share Post