National

ನಾನು ತೆಲುಗು ಬಿಟ್ಟು ಯಾವ ಭಾಷೆ ಚಿತ್ರವೂ ಮಾಡಲ್ಲ; ಟಾಲಿವುಡ್‌ ಪ್ರಿನ್ಸ್‌ ಮಹೇಶ್‌ ಬಾಬು

ಹೈದರಾಬಾದ್: ನಾನು ತೆಲುಗು ಚಿತ್ರ ಬಿಟ್ಟು ಬೇರೆ ಯಾವ ಆಬಷೆಯ ಸಿನಿಮಾವನ್ನೂ ಮಾಡುವುದಿಲ್ಲ ಎಂದು ಟಾಲಿವುಡ್‌ ಪ್ರಿನ್ಸ್‌ ಮಹೇಶ್‌ ಬಾಬು ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು , ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯವಿಲ್ಲ. ನಾನು ತೆಲುಗು ಸಿನಿಮಾವನ್ನು ಮಾತ್ರ ಮಾಡುತ್ತೇನೆ. ಆ ಸಿನಿಮಾ ಪ್ರಪಂಚದ್ಯಾಂತ ತೆರೆಕಾಣುತ್ತೆ. ಬಾಲಿವುಡ್ ಚಿತ್ರರಂಗಕ್ಕೆ ನಾನ್ಯಾಕೆ ಹೋಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಮಹೇಶ್‌ ಬಾಬು ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಹಲವು ವರ್ಷಗಳು ಕಳೆದಿವೆ. ಆದರೆ, ಇದುವರೆಗೆ ಅವರು ಬೇರೆ ಭಾಷೆ ಚಿತ್ರಗಳಲ್ಲಿ ನಟಿಸಿಲ್ಲ. ಇತ್ತೀಚೆಗೆ ಮಹೇಶ್‌ ಬಾಬು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಹೇಶ್‌ ಬಾಬುಗೆ ಪ್ರಶ್ನೆ ಕೇಳಿದ್ದರು.

Share Post