ಹಿಜಾಬ್ ವಿವಾದ: ಮುಂದಿನ ಚುನಾವಣೆಗೆ ಲಾಭ ಪಡೆಯುವ ದುರುದ್ದೇಶ-ಮಾಜಿ ಪ್ರಧಾನಿ
ದೆಹಲಿ:(Delhi) ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಈಗಾಗಲೇ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಈ ಪ್ರಕರಣ ಈಗಾಗಲೇ ಸಂಸತ್ನಲ್ಲೂ ಚರ್ಚೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು(Devegowda) ಪ್ರತಿಕ್ರಿಯೆ ನೀಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿರುವ ದೇವೇಗೌಡರು 2023ರ ವಿಧಾನಸಭೆ(Vidhanasabhe election) ಚುನಾವಣೆಗೋಸ್ಕರ ಹಿಜಾಬ್ ವಿವಾದವನ್ನ ವಿವಿಧ ರಾಜಕೀಯ ಪಕ್ಷಗಳು ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಕೆಲವೊಂದು ದುಷ್ಟ ಹಿತಾಸಕ್ತಿಗಳ ಕೈವಾಡವಿದ್ದು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಪಕ್ಷಗಳನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿವೆ. ದೇಶವನ್ನು ಒಡೆಯಲು ಪಿತೂರಿ ನಡೆಯುತ್ತಿದೆ. ಕೂಡಲೇ ಇಂತಹ ವಿಷಮ ಪರಿಸ್ಥಿತಿಯನ್ನು ತಿಳಿಗೊಳಿಸದೆ ಇದ್ದರೆ ಇದರ ಪರಿಣಾಮ ಬಹಳ ಗಂಭೀರವಾಗಿರುತ್ತದೆ ಎಂದಿದ್ದಾರೆ
ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಈ ವಿವಾದಕ್ಕೆ ಅಲ್ಲಿನ ರಾಜಕೀಯ ಸಂಘಟನೆವೊಂದು ವಿವಾದದ ಕಿಡಿ ಹೊತ್ತಿಸಿದ್ದು, ಇದೀಗ ವಿವಿಧ ಪಕ್ಷಗಳು ಇದರ ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ವಿವಾದವನ್ನ ತಕ್ಷಣವೇ ಹತ್ತಿಕ್ಕಬೇಕು ಎಂದು ದೇವೇಗೌಡರು ಸಲಹೆ ನೀಡಿದ್ರು.
There are some elements that are misleading the students and political parties are taking advantage for 2023 elections. The govt can stop this. Such issues divide the nation: Former Prime Mininster and Janata Dal-Secular (JDS) president HD Deve Gowda on Karnataka hijab issue pic.twitter.com/XBw6tzp8pM
— ANI (@ANI) February 7, 2022