ದೊಡ್ಡಗೌಡರ ಜೊತೆ ಇಡ್ಲಿ-ವಡೆ ಸವಿದ ಸ್ವಾಮಿ; ಕುತೂಹಲ ಕೆರಳಿಸಿದ ಭೇಟಿ
ನವದೆಹಲಿ: ಇಂದು ಬೆಳಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಂದು ಬೆಳಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು, ಸುಬ್ರಮಣಿಯನ್ ಸ್ವಾಮಿಯವರನ್ನು ಉಪಾಹಾರಕ್ಕೆ ಕರೆದಿದ್ದರು. ಹೀಗಾಗಿ ದೆಹಲಿಯ ದೇವೇಗೌಡರ ಮನೆಗೆ ಸುಬ್ರಮಣಿಯನ್ ಸ್ವಾಮಿ ಭೇಟಿ ನೀಡಿದ್ದು, ಇಡ್ಲಿ-ವಡೆ ಸೇವಿಸಿ ಇಬ್ಬರು ಲೋಕಾಭಿರಾಮವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸುಬ್ರಮಣಿಯನ್ ಸ್ವಾಮಿಯವರೇ ಟ್ವೀಟ್ ಮಾಡಿದ್ದು, ಇಬ್ಬರು ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
This morning I have had the pleasure of my long term dear friend Fmr PM Deve Gowda who invited me for Idli dosa vada breakfast. Discussed old times and future developments. I hope ABs & GBs do not have another heart attack and foam in the mouth
— Subramanian Swamy (@Swamy39) November 30, 2021
ಇಂದು ಬೆಳಗ್ಗೆ ನನ್ನ ದೀರ್ಘಕಾಲದ ಆತ್ಮೀಯ ಸ್ನೇಹಿತ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಆಹ್ವಾನದ ಮೇರೆಗೆ ದೋಸೆ, ಇಡ್ಲಿ ಮತ್ತು ವಡೆ ಉಪಹಾರಕ್ಕಾಗಿ ತೆರಳಿದ್ದೆ. ಈ ಭೇಟಿಯಿಂದ ನನಗೆ ಬಹಳ ಸಂತೋಷವಾಗಿದೆ. ಭೇಟಿಯಲ್ಲಿ ಹಲವು ದಶಕಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜೊತೆಗೆ ಭವಿಷ್ಯದ ಬೆಳವಣಿಗೆ ಬಗ್ಗೆ ಕೂಡಾ ಇಬ್ಬರೂ ಚರ್ಚಿಸಿದೆವು ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಹಿರಿಯ ನಾಯಕರಾಗಿರುವ ಸಂಸದ ಸುಬ್ರಮಣಿಯನ್ ಸ್ವಾಮಿಯವರು, ಇತ್ತೀಚೆಗೆ ಮೋದಿ ಆಡಳಿತವನ್ನು ಟೀಕಿಸುತ್ತಾ ಬಂದಿದ್ದಾರೆ. ಈ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯವಲಯದಲ್ಲಿ ಚರ್ಚಗೆ ಕಾರಣವಾಗಿದೆ.