ಶಾಲಾ ಆವರಣದಲ್ಲೇ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಪತ್ತೆಗೆ ಶೋಧ
ರಾಜಸ್ಥಾನ; ಕಾಮುಕರು ಶಾಲಾ ಆವರಣದಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ರಾಜಸ್ಥಾನದ ಮೌಂಟ್ ಅಬುನಲ್ಲಿ ನಡೆದಿದೆ. ಮಾರುಕಟ್ಟೆಗೆ ಹೋಗಿ ಹಿಂತಿರುಗುತ್ತಿದ್ದಾಗ ೧೫ ವರ್ಷದ ಬಾಲಕಿಯನ್ನು ಶಾಲಾ ಆವರಣಕ್ಕೆ ಕರೆದೊಯ್ದ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.
ಮೌಂಟ್ ಅಬುನ ಮ್ಯೂಸಿಯಂ ಕ್ರಾಸ್ ರೋಡ್ಸ್ನಲ್ಲಿರುವ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಕೃತ್ಯ ನಡೆದಿದೆ. ಘಟನೆ ಬಳಿಕ ಸಂತ್ರಸ್ತೆ ಅಸ್ವಸ್ಥಳಾಗಿದ್ದು, ಕಷ್ಟಪಟ್ಟು ಮನೆ ತಲುಪಿದ್ದಾಳೆ. ನಡೆದ ಘಟನೆಯನ್ನು ಕುಟುಂಬದವರಿಗೆ ವಿವರಿಸಿದ್ದಾಳೆ. ಅನಂತರ ಪೋಷಕರು, ಮೌಂಟ್ ಅಬು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ