National

ಉತ್ತರಭಾರತದಾದ್ಯಂತ ಶೀತಗಾಳಿ: ಮಡುಗಟ್ಟಿದ ರಾಜಧಾನಿ ಜನತೆ

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಶೀತಗಾಳಿಗೆ ನಲುಗಿಹೋಗಿದೆ. ಮನೆಯಿಂದ ಹೊರಬರಲಾರದೆ ಜನ ತತ್ತರಿಸಿ ಹೋಗಿದ್ದಾರೆ. ದೆಹಲಿಯ ವಾತಾವರಣವಂತೂ ಕೇಳೋದೆ ಬೇಡ ಇಂದು ಬೆಳಗ್ಗೆ 8.30 ಸಮಯವಾದ್ರೂ ಎಲ್ಲೆಡೆ ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ. ಸಫ್ತರ್‌ಜಂಗ್‌ನ ತಾಪಮಾನ ನೋಡಿದ್ರೆ 4ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.

ಕಳೆದ ಎರಡು ದಿನಗಳಿಂದ ಇದೇ ವಾತಾವರಣ ದೆಹಲಿಯ ಜನರನ್ನು ಕಾಡಿಸುತ್ತಿದೆ. ಕೇವಲ ದೆಹಲಿ ಮಾತ್ರವಲ್ಲದೆ ಉತ್ತರಭಾರತದ ಹಿಮಾಚಲಪ್ರದೇಶ, ಜಮ್ಮು-ಕಾಶ್ಮೀರ, ಉತ್ತರಾಖಂಡ, ಪಂಜಾಬ್ ರಾಜ್ಯಗಳಲ್ಲಿ ಶೀತಗಾಳಿ ಆವರಿಸಿದೆ. ಈ ವಾತಾವರಣ ಕೆಲವು ದಿನಗಳವರೆಗೆ ಹೀಗೆ ಮುಂದುವರೆಯಲಿದೆ ಅಂತ ಹವಾಮಾನ ಇಲಾಖೆ ಕೂಡ ಮಾಹಿತಿ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ದಟ್ಟ ಮಂಜು ಕವಿದ ವಾತಾವರಣದಲ್ಲಿ ಜನ ಬೆಂಕಿ ಕಾಯಿಸುತ್ತಿದ್ದಾರೆ. ಇನ್ನು ಕೆಲವರು ಟೀ ಅಂಗಡಿ ಮುಂದೆ ಬಿಸಿ ಬಿಸಿ ಚಹಾ ಹೀರಿದ್ರು, ಹಲವರು ಬೆಡ್‌ಶೀಟ್‌ ಹೊದ್ದುಕೊಂಡು ರಸ್ತೆಗಳನ್ನು ಓಡಾಡುವುದು ಹೊಸದಾಗಿರಲಿಲ್ಲ. ಇಷ್ಟೇ ಅಲ್ಲದೆ ಹಿಮಾಚಲಪ್ರದೇಶದ ಹಿಮಪಾತವು ಬಯಲು ಸೀಮೆಯ ಮೇಲೆ ಪ್ರಭಾವ ಬೀರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯನ್ನು ಸಹ ನೀಡಿದೆ.

 

Share Post