HealthLifestyleNational

ಪ್ರಿಯಕರನೊಂದಿಗೆ ರತಿಕ್ರೀಡೆ ವೇಳೆ ತೀವ್ರ ರಕ್ತಸ್ರಾವ; ಯುವತಿ ಸಾವು!

ಗುಜರಾತ್‌; ಪ್ರಿಯಕರನೊಂದಿಗೆ ರತಿಕ್ರೀಡೆಯಲ್ಲಿ ತೊಡಗಿದ್ದಾಗ ತೀವ್ರ ರಕ್ತಸ್ರಾವವಾಗಿ 23 ವರ್ಷದ ನರ್ಸಿಂಗ್‌ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.. ಗುಜರಾತ್‌ ರಾಜ್ಯದ ನವಸಾರಿ ಜಿಲ್ಲೆಯ ಖಾಸಗಿ ಹೋಟೆಲ್‌ ಒಂದರಲ್ಲಿ ಈ ಘಟನೆ ನಡೆದಿದೆ.. ಪ್ರಿಯತಮೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರೂ, ಪ್ರಿಯಕರ ಅಂಬುಲೆನ್ಸ್‌ ಕರೆಸಿಲ್ಲ.. ಬದಲಾಗಿ ಒಂದೂವರೆ ಗಂಟೆಗೂ ಹೆಚ್ಚುಕಾಲ ಆನ್‌ಲೈನ್‌ನಲ್ಲಿ ರಕ್ತಸ್ರಾವ ನಿಲ್ಲಿಸಲು ಮನೆಮದ್ದು ಹುಡುಕಿದ್ದಾನೆ.. ಹೀಗಾಗಿ ಯುವತಿ ಸಾವನ್ನಪ್ಪಿದ್ದಾಳೆ.. ಪೊಲೀಸರು ಪ್ರಿಯತಮನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..
ಇಬ್ಬರೂ ಗಾಢವಾಗಿ ಲೈಂಗಿಕ ಕ್ರಿಯೆ ನಡೆಸಿದ್ದು, ಈ ವೇಳೆ ಯುವತಿಯ ಖಾಸಗಿ ಭಾಗದಲ್ಲಿ ತೀವ್ರ ಗಾಯವಾಗಿದೆ.. ಇದರಿಂದ ಆಕೆಗೆ ಹೆಚ್ಚಿನ ರಕ್ತಸ್ರಾವವಾಗಿದೆ.. ಇದರಿಂದ ಯುವತಿ ತೀವ್ರವಾಗಿ ಅಸ್ವಸ್ಥಳಾಗಿದ್ದಾಳೆ.. ಆದ್ರೆ ಪ್ರಿಯತಮ ಹೊರಗಡೆ ಗೊತ್ತಾದರೆ ಏನಾಗುತ್ತೋ ಎಂಬ ಭಯದಿಂದ ಆಸ್ಪತ್ರೆಗೆ ಕರೆ ಮಾಡಿಲ್ಲ.. ಬಟ್ಟೆಯ ಸಹಾಯದಿಂದ ರಕ್ತಸ್ರಾವ ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ..
ಕೊನೆಗೆ ಯುವತಿ ತೀವ್ರ ಅಸ್ವಸ್ಥಳಾದ ಮೇಲೆ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲಾಗಿದೆ.. ಆದ್ರೆ ಯುವತಿಯ ಮನೆಯವರು ಬರುವ ವೇಳೆ ಆಕೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.. ಯುವತಿ ಪ್ರಥಮ ವರ್ಷದ ನರ್ಸಿಂಗ ಓದುತ್ತಿದ್ದಳು.. ಈಕೆಗೆ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೀತಿ ಚಿಗುರಿತ್ತು.. ಇಬ್ಬರೂ ಭೇಟಿಯಾಗಿದ್ದು, ಲಾಡ್ಜ್‌ನಲ್ಲಿ ರೂಮ್‌ ಬುಕ್‌ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ.. ಈ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ..

Share Post