Districts

ಪುಂಡರ ಕಿರುಕುಳಕ್ಕೆ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಚಿತ್ರದುರ್ಗ : ಹೊಸದುರ್ಗ ತಾಲ್ಲುಕಿನಲ್ಲಿ ಯುವತಿ ಒಬ್ಬರು ಪುಂಡರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶೀರನ ಕಟ್ಟೆ ಗ್ರಾಮದ ರಾಧಿಕಾ (17) ಆತ್ಮಹತ್ಯೆಗೆ ಶರಣಾದ ಯುವತಿ.

ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ದಿನ ರಸ್ತೆಯಲ್ಲಿ ಹೋಗುವಾಗ ಯುವಕರು ಕಿರುಕುಳ ನೀಡುತ್ತಿದ್ದರು. ಹುಡುಗಿಯನ್ನು ಹಿಂಬಾಲಿಸುವುದು, ಜಡೆ ಎಳೆಯುವುದು, ಅಶ್ಲೀಲ ಮಾತುಗಳನ್ನಾಡುವುದ್ದನ್ನು ಪುಂಡರು ಮಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪೋಷಕರು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಯುವತಿಯ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ :

ಪಾರ್ಕ್‌ನಲ್ಲಿ ಅಪರಿಚಿತರಿಂದ ಗುಂಡಿನ ದಾಳಿ

Share Post