CrimeNational

ಸಾಲ ತೀರಿಸಲಿಲ್ಲ ಗಂಡ; ಪತಿಯ ಎದುರೇ ಪತ್ನಿಯ ಅತ್ಯಾಚಾರ

ಮುಂಬೈ; ವ್ಯಕ್ತಿಯೊಬ್ಬ ಸಾಲ ಪಡೆದಿದ್ದು, ಅದನ್ನು ಹಿಂತಿರುಗಿಸಿಲ್ಲ. ಇದರಿಂದಾಗಿ ಸಾಲ ಕೊಟ್ಟಾತ ಸಾಲ ತೆಗೆದುಕೊಂಡುವನ ಎದುರೇ ಆತನ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಮಹಿಳೆಯ ಪತಿ 40 ಸಾವಿರ ರೂಪಾಯಿ ಸಾಲ ಮಾಡಿದ್ದ. ಆದ್ರೆ ಅದನ್ನು ಹಿಂತಿರುಗಿಸಲು ಆಗಿರಲಿಲ್ಲ. ಹೀಗಾಗಿ ಸಾಲ ಕೊಟ್ಟಾತ ಬಂದು ಧಮ್ಕಿ ಹಾಕಿದ್ದಾನೆ. ಸಾಲದೆಂಬಂತೆ ಚಾಲು ತೋರಿಸಿ, ಸಾಲ ಪಡೆದಾತನ ಸಮ್ಮುಖದಲ್ಲೇ ಆತನ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾನೆ.

ಫೆಬ್ರವರಿ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಇದೀಗ ಘಟನೆ ಬೆಳಕಿಗೆ ಬಂದಿದೆ. ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Share Post