National

ದೆಹಲಿ ಸರ್ಕಾರದ ಶಾಸಕರ ಸಂಬಳದಲ್ಲಿ ಭಾರಿ ಏರಿಕೆ

ನವದೆಹಲಿ; ದೆಹಲಿ ಸರ್ಕಾರದ ಶಾಸಕರ ವೇತನವನ್ನು ಭಾರಿ ಮಟ್ಟದಲ್ಲಿ ಹೆಚ್ಚಿಸಲಾಗಿದೆ. ಇಲ್ಲಿನ ಶಾಸಕರ ಭತ್ಯೆ, ಪಿಂಚಣಿ ತಿದ್ದುಪಡಿ ಮಾಡಿ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

        ಹೀಗಾಗಿ ಇಲ್ಲಿನ ಶಾಸಕರ ವೇತನ ತಿಂಗಳಿಗೆ 54,000 ರೂಪಾಯಿಯಿಂದ 90,000 ರೂಪಾಯಿಗೆ ಏರಿಕೆಯಾಗಿದೆ.  ಕಾಯಿದೆ ಅಂಗೀಕಾರದ ಬಳಿಕ ಈ ಸಂಬಳವನ್ನು ಪಡೆಯಲಿದ್ದಾರೆ.  ಇದಲ್ಲದೇ ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರ ಸಂಬಳ ಮಾಸಿಕವಾಗಿ 72,000 ರೂ. ಯಿಂದ 1,70,000 ರೂ.ಗೆ ಏರಿಕೆಯಾಗಿದೆ.

 

Share Post