National

ತಿರುಪತಿ ʻಲಡ್ಡುʼ ತಯಾರಿಕೆಯಲ್ಲಿ ಸಾವಯವ ಕೃಷಿ ಪದಾರ್ಥಗಳ ಬಳಕೆ-ಅನ್ನದಾತ ಸಂತಸ

ತಿರುಪತಿ:  ಜಗತ್ಪ್ರಸಿದ್ಧ ತಿರುಪತಿ ತಿಮ್ಮಪ್ಪ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತಿರುಪತಿ ಎಂದಾಕ್ಷಣ ನೆನಪಾಗೋದು ವೆಂಕಟರಮಣ. ದೇವರು ಬಿಟ್ಟರೆ ನೆನಪಾಗೋದು ಬಾಯಲ್ಲಿ ನೀರೂರಿಸುವ ʻಲಡ್ಡುʼ  ಶ್ರೀವಾರಿ ಲಡ್ಡು  ಎಲ್ಲಕ್ಕಿಂತ ಪವಿತ್ರವೆಂದು ಪರಿಗಣಿಸಲಾಗಿದೆ. ತಿರುಪತಿಗೆ ಹೋಗಿ ಬಂದವರು ಲಡ್ಡು ಮಾತ್ರ ಮರೆಯದೇ ತರುತ್ತಾರೆ.  ಈ ಲಡ್ಡು ತಯಾರಿಕೆಯಲ್ಲಿ ಹಲವು ಪದಾರ್ಥಗಳನ್ನು ಬಳಸುತ್ತಾರೆ  ಸಕ್ಕರೆ, ತುಪ್ಪ, ಗೋಡಂಬಿ, ಕಡಲೆಕಾಯಿ ಮತ್ತು ಇತರೆ ಪದಾರ್ಥಗಳನ್ನು ಬಳಸಲಾಗುತ್ತದೆ ಇದರಲ್ಲಿ ಎಲ್ಲವೂ ಮುಖ್ಯವಾಗಿರುತ್ತದೆ. ಯಾವುದನ್ನೂ ಬಿಡುವಂತಿಲ್ಲ. ದೇವಾಲಯದಲ್ಲಿ ತಯಾರಾಗುವ ಲಡ್ಡು ಗೆ ತಾವು ಬೆಳೆದ ಬೆಳೆ ಕಳಿಸುವುದು ನಮ್ಮ ಪಾಲಿನ ಭಾಗ್ಯ ಅಂತಿದಾರೆ ಅಲ್ಲಿನ ರೈತರು.

ಟಿಟಿಡಿ ರಾಸಾಯನಿಕ ಮುಕ್ತ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರ ಭಾಗವಾಗಿ ಕಡಲೆ ಬೆಳೆ ಸಂಗ್ರಹಿಸಲು ಟಿಟಿಡಿ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ. ಝಡ್ ಬಿಎಸ್ಎಫ್ ವಿಭಾಗದ ಆಶ್ರಯದಲ್ಲಿ, ತಾಡಿಪತ್ರಿ ವಲಯದ ಬೊಂಡಲದಿನ್ನೆ ಗ್ರಾಮದ 57 ರೈತರು ನೈಸರ್ಗಿಕ ಪದ್ಧತಿಯಲ್ಲಿ 185 ಎಕರೆಯಲ್ಲಿ 1,396 ಕ್ವಿಂಟಾಲ್ ಕಡಲೆ ಬೆಳೆಯನ್ನು ಕಟಾವು ಮಾಡಿದ್ದಾರೆ.

ಈ ಬೆಳೆ ಬೇರೆ ರಸಾಯನಿಕವನ್ನು ಸಿಂಪಡಿಸದೆ ಗೋಸಗಣಿ, ಗೋಮೂತ್ರ, ಕಡಲೆ ಹಿಂಡಿ ಮುಂತಾದ ನೈಸರ್ಗಿಕ ರಸಗೊಬ್ಬರಗಳನ್ನು ಬೆಳೆದು ಸಾವಯವ ಕೃಷಿ ಬೆಳೆ ತೆಗೆಯಲು ಅನುವು ಮಾಡಿಕೊಟ್ಟಿದ್ದಾರಂತೆ.

ಈ ತಿಂಗಳ ಅಂತ್ಯದೊಳಗೆ ಬೆಳೆ ಕಟಾವು ಮಾಡಿ  1,396 ಕ್ವಿಂಟಲ್ ಟಿಟಿಡಿಗೆ ಕಳುಹಿಸಲು ಕ್ರಮಕೈಗೊಳ್ಳಲಾಗುತ್ತಿದೆ ಅಂತಾರೆ ರೈತರು.ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಶೇ.20 ರಷ್ಟು ಹೆಚ್ಚಿನ ಹಣ ನೀಡಲು ಟಿಟಿಡಿ ನಿರ್ಧರಿಸಿದೆ. ನಾವು ಬೆಳೆದು ಕೊಯ್ಲು ಮಾಡಿದ ಕಡಲೆಯಿಂದ ತಿರುಮಲ ವೆಂಕಣ್ಣನ ಪ್ರಸಾದ ತಯಾರಾಗುತ್ತೆ ಅಂದ್ರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ ಎಂದು ರೈತರು ಸಂಸ ವ್ಯಕ್ತಪಡಿಸಿದ್ದಾರೆ.

Share Post