NationalPolitics

ಕೇರಳದಲ್ಲಿ ಭಾರತ್‌ ಜೋಡೋ ಯಾತ್ರೆಗೆ ಉತ್ತಮ ಸ್ಪಂದನೆ

ತಿರುವನಂತಪುರಂ; ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿರುವ ಭಾರತ್ ಜೋಡೊ ಯಾತ್ರೆಗೆ ಕೇರಳದಲ್ಲಿ ಇಂದು ವ್ಯಾಪಕ ಜನಸ್ಪಂದನೆ ಸಿಕ್ಕಿದೆ. ಬೆಳಗ್ಗೆ ಕೇರಳದ ವೆಲ್ಲಾಯನಿ ಜಂಕ್ಷನ್​ನಿಂದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಯಾತ್ರೆಯನ್ನು ಮುಂದುವರೆಸಿದರು. ಈ ಸಂದರ್ಭದಲ್ಲಿ ವಯನಾಡ್ ಸಂಸದ ರಾಹುಲ್​ರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲೂ ಜನಸ್ತೋಮ ನೆರೆದಿತ್ತು.

   ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ನಡೆದು ಬರುತ್ತಿದ್ದು, ರಾಹುಲ್​ರನ್ನು ನೋಡುವ ಸಲುವಾಗಿಯೇ ಇನ್ನೂ ಸಾವಿರಾರು ಜನ ಯಾತ್ರೆಯ ಮಾರ್ಗದುದ್ದಕ್ಕೂ ಜಮಾಯಿಸಿದ್ದಾರೆ. ಭಾನುವಾರ ಇಲ್ಲಿನ ನೇಮೊಮ್‌ನಲ್ಲಿ ದಿನದ ಯಾತ್ರೆ ಮುಕ್ತಾಯಗೊಂಡಾಗ, ಕೇರಳವು ಎಲ್ಲರನ್ನೂ ಗೌರವಿಸುತ್ತದೆ ಮತ್ತು ತಮ್ಮನ್ನು ವಿಭಜಿಸಲು ಅಥವಾ ದ್ವೇಷವನ್ನು ಹರಡಲು ಬಿಡುವುದಿಲ್ಲ. ಭಾರತ್ ಜೋಡೋ ಯಾತ್ರೆಯು ಒಂದರ್ಥದಲ್ಲಿ ಈ ಆಲೋಚನೆಗಳ ವಿಸ್ತರಣೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
 ಸಂಜೆ 5 ಗಂಟೆಗೆ ಯಾತ್ರೆ ಕಜಕುಟ್ಟಂ ತಲುಪಲಿದ್ದು, ಅಲ್ಲಿ ದಿನದ ಪ್ರಯಾಣ ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಯಾತ್ರೆಯ ವಿವರದಲ್ಲಿ ತಿಳಿಸಲಾಗಿದೆ. ಶನಿವಾರ ಸಂಜೆ ಕೇರಳ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನ ಯಾತ್ರೆಯ 19 ದಿನಗಳ ಅವಧಿಯಲ್ಲಿ ಏಳು ಜಿಲ್ಲೆಗಳ ಮೂಲಕ 450 ಕಿಲೋಮೀಟರ್‌ ದೂರ ಕ್ರಮಿಸಲಿದೆ.
Share Post