CrimeNational

ಹಾಡಹಗಲೇ ಸಾಋವಜನಿಕ ಶೌಚಾಲಯದಲ್ಲಿ ಯುವತಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

ಉತ್ತರಪ್ರದೇಶ: ದಿನಂಪ್ರತಿ ಒಂದಿಲ್ಲೊಂದು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಲೇ ಇರುತ್ವೆ ಅದರಲ್ಲೂ ಉತ್ತರಪ್ರದೇಶ ಅಂತೂ ಅತ್ಯಾಚಾರ ತಾಣವಾಗಿದೆ. ಕಳೆದ ಎರಡು ದಿನಗಳ ಹಿಂದೆ ಸಾರ್ವಜನಿಕ ಶೌಚಾಲಯದಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ತಡವಾಗಿ ಬೆಳಕಿಗೆ ಬಂದಿದೆ.

ಹೌದು ತನ್ನ ಪತಿಯೊಂದಿಗೆ ರೈಲಿಗಾಗಿ ಕಾಯುತ್ತಿದ್ದ ಇಪ್ಪತ್ತು ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದ ಘಟನೆ ಉತ್ತರಪ್ರದೇಶದ ಪ್ರತಾಪ್‌ ಘಡದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲಿಗಾಗಿ ಕಾಯುತ್ತಿದ್ದ ದಂಪತಿ. ರೈಲು ಬರುವುದು ತಡವಾಗುವುದನ್ನು ತಿಳಿದು ಪತಿ ಚಹಾ ತರಲು ಅಂಗಡಿ ಬಳಿ ಹೋಗಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಅನಾಮಿಕ ವ್ಯಕ್ತಿಯೊಬ್ಬ ಸಾರ್ವಜನಿಕ ಶೌಚಾಲಯದ ಬೀಗದ ಕೀ ನೀಡಿ, ಅದನ್ನು ಬಳಸುವಂತೆ ಸೂಚಿಸಿದ್ದಾನೆ. ರೈಲಿಗಾಗಿ ಕಾದು ಕಾದು ಸುಸ್ತಾದ ಯುವತಿ ಶೌಚಾಲಯದ ಬಳಿ ತೆರಳಿದ್ದಾಳೆ ಬಾಗಿಲು ತೆಗೆಯುತ್ತಿದ್ದಂತೆ ಯುವತಿಯನ್ನು ಒಳಗೆ ಎಳೆದೊಯ್ದು ಅತ್ಯಾಚಾರ ಮಾಡಿ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಪತ್ನಿಯನ್ನು ಹುಡುಕಿ ಬಂದ ಪತಿ ಕೂಡಲೇ ವಿಚಾರ ತಿಳಿದು ಅಲ್ಲಿಂದ ಪತ್ನಿಯನ್ನು ರಕ್ಷಿಸಿ ಪೊಲೀಸ್‌ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ (ಐಪಿಸಿ ಸೆಕ್ಷನ್ 376) ದಾಖಲಿಸಿ, ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಎರಡು ತಂಡಗಳನ್ನು ರಚನೆ ಮಾಡಲಾಗಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Share Post