CrimeNational

ನಾಗ್ಪುರದ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಾಡುತ್ತಾ ಜಗಳವಾಡಿಕೊಂಡ ದಂಪತಿ!

ನಾಗ್ಪುರ; ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತೊಂದಿದೆ.. ಆದ್ರೆ ಈಗ ಅದನ್ನು ಗಂಡ-ಹೆಂಡತಿ ಜಗಳ ಬೀದಿಯಲ್ಲಿ ಬೆತ್ತಲೆಯಾಗುವ ತನಕ ಅಂತ ಬದಲಾಯಿಸಿಕೊಳ್ಳಬೇಕಿದೆ.. ಯಾಕಂದ್ರೆ ಮಹಾರಾಷ್ಟ್ರದಲ್ಲಿ ನಾಗ್ಪುರದ ಪ್ರತಿಷ್ಠಿತ ಏರಿಯಾದಲ್ಲಿ ಕಾರಿನಲ್ಲಿ ಬೆತ್ತಲೆಯಾಗಿ ಬಂದ ದಂಪತಿ, ಕಾರಿನಿಂದ ಇಳಿದು ಬೆತ್ತಲೆಯಾಗಿಯೇ ಓಡಾಡುತ್ತಾ ಜಗಳವಾಡಿದ್ದಾರೆ.. ಇದನ್ನು ನೋಡಿದ ಒಂದಿಬ್ಬರು ವಿಡಿಯೋ ಮಾಡಿದ್ದು, ಅದು ಈಗ ವೈರಲ್‌ ಆಗುವುದಲ್ಲದೆ, ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ..

ಇದನ್ನೂ ಓದಿ; ಈ ಆರು ರಾಶಿಗಳವರಿಗೆ ಹಣದ ಸಮಸ್ಯೆಯಿಂದ ಪೂರ್ತಿ ವಿಮುಕ್ತಿ!

ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ನಾಗ್ಪುರದ ಲಕ್ಷ್ಮೀನಗರದ ಪ್ರದೇಶದ ಬೀದಿಗಳಲ್ಲಿ ದಂಪತಿ ಬೆತ್ತಲೆಯಾಗಿ ಓಡಾಡುತ್ತಾ ಜಗಳ ಮಾಡಿದ್ದಾರೆ.. ಈ ವೇಳೆ ಬೈಕ್‌ನಲ್ಲಿ ಬಂದ ಸ್ಥಳೀಯ ಯುವಕರು ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ.. ಈ ಪ್ರದೇಶದಲ್ಲಿ ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ಜೀವನ ಮಾಡುತ್ತಾರೆ.. ಇಂತಹ ಪ್ರದೇಶದಲ್ಲಿ ಈ ಘಟನೆ ನಡೆದಿರುವ ಚರ್ಚೆಗೆ ಕಾರಣವಾಗಿದೆ.. ಪ್ರತ್ಯಕ್ಷಿದರ್ಶಿಗಳು ಹೇಳುವ ಪ್ರಕಾರ ಕಾರಿನಿಂದ ಇಳಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಬೆತ್ತಲೆಯಾಗಿ ನಡೆಯುತ್ತಿದ್ದ.. ನಂತರ ಯುವತಿಯೊಬ್ಬಳು ಆತನ ಹಿಂದೆಯೇ ನಗ್ನ ಸ್ಥಿತಿಯಲ್ಲಿ ಓಡುತ್ತಾ ಬರುತ್ತಾಳೆ.. ಆಕೆ ಆತನ ಬಳಿ ಕ್ಷಮೆಯಾಚಿಸುತ್ತಿದ್ದಳು. ಕಾರಿನಲ್ಲಿ ಕುಳಿತುಕೊಳ್ಳುವಂತೆ ಬೇಡಿಕೊಳ್ಳುತ್ತಿದ್ದಳಂತೆ..

ಇದನ್ನೂ ಓದಿ; ದಸರಾ ಉತ್ಸವಕ್ಕಾಗಿ ಕುದುರೆ ಸವಾರಿ ಕಲಿಕೆ; ಬಿದ್ದು ಯಾದವರಾಜ ವಶಂಸ್ಥ ಸಾವು!

ಈ ವಿಡಿಯೋ ವೈರಲ್‌ ಆದ ಮೇಲೆ ಪೊಲೀಸರು ಆ ದಂಪತಿ ಹಾಗೂ ಪೋಷಕರನ್ನು ಕರೆಸಿ ಮಾತನಾಡಿದ್ದಾರೆ.. ಇನ್ನೊಮ್ಮೆ ಇಂತಹ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ..

Share Post