CrimeNational

ರೆಪ್ರಿಜರೇಟರ್‌ನ ಕಂಪ್ರೆಸರ್‌ ಸ್ಫೋಟ; ಒಂದೇ ಕುಟುಂಬದ ಐವರ ಸಾವು!

ಜಲಂಧರ್‌; ಪಂಜಾಬ್‌ನ ಜಲಂಧರ್‌ನ ಮನೆಯೊಂದರಲ್ಲಿ ನಡೆದ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ರೆಫ್ರಿಜರೇಟರ್‌ನ ಕಂಪ್ರೆಸರ್‌ ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಯಶಪಾಲ್ ಘಾಯ್ (70), ರುಚಿ ಘಾಯ್ (40), ಮನ್ಶಾ (14), ದಿಯಾ (12) ಮತ್ತು ಅಕ್ಷಯ್ (10)  ಮೃತಪಟ್ಟ ದುರ್ದೈವಿಗಳು.

ಭಾನುವಾರ ರಾತ್ರಿ ಈ ದುರಂತ ನಡೆದಿದ್ದು, ಘಟನೆ ನಂತರ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರ ತಂಡವನ್ನು ಕರೆಯಲಾಗಿದೆ.

Share Post