CrimeDistricts

ಬೆಂಗಳೂರು, ಬೆಳಗಾವಿ ಜೈಲು ಸ್ಫೋಟ ಬೆದರಿಕೆ ಕರೆ; ಅಧಿಕಾರಿಗಳಲ್ಲಿ ಆತಂಕ

ಬೆಳಗಾವಿ; ಬೆಳಗಾವಿಯ ಬಂಧೀಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿಪಿ ಶೇಷ ಅವರಿಗೆ ಬೆದರಿಕೆ ಕರೆ ಬಂದಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹ ಹಾಗೂ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದಾಗಿ ಅಧಿಕಾರಿಗಳಲ್ಲಿ ಆತಂಕ ಉಂಟಾಗಿದೆ.

ಅಧಿಕಾರಿಗಳು ವಾಸಿಸುವ ವಸತಿಗೃಹದ ಮೇಲೂ ಬಾಂಬ್‌ ಹಾಕಿ ಸ್ಫೋಟಿಸಲಾಗುವುದು ಎಂದು ದುಷ್ಕರ್ಮಿ ಹೇಳಿದ್ದಾನೆ. ಅನಾಧೇಯ ಕರೆ ಇದಾಗಿದ್ದು, ಈ ಕರೆ ಎಲ್ಲಿಂದ ಬಂತು, ಯಾರು ಈ ಕರೆ ಮಾಡಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಹಿಂಡಲಗಾ ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿ ಈ ಕರೆ ಮಾಡಲಾಗಿದೆ.  ಜೈಲಿನಲ್ಲಿ ಕೈದಿಗಳಿಂದ ಗಲಭೆ ಸೃಷ್ಟಿಸಿ ಹಲ್ಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಲಾಗಿದೆ.

ಭೂಗತ ಪಾತಕಿ ಬನ್ನಂಜೆ ರಾಜನ ಹೆಸರನ್ನು ಆ ದುಷ್ಕರ್ಮಿ ಹೇಳಿದ್ದಾನೆ ಎಂದು ತಿಳಿದಬಂದಿದೆ.

 

Share Post