CrimeDistricts

ಮೈಸೂರು ರಿಂಗ್‌ ರಸ್ತೆಯಲ್ಲಿ ಅಪಘಾತಗಳು ಹೆಚ್ಚಳ; ಇನ್ನೋವಾ ಕಾರುಗಳು ಮುಖಾಮುಖಿ ಡಿಕ್ಕಿ

ಮೈಸೂರು; ಮೈಸೂರು ರಿಂಗ್‌ ರಸ್ತೆಯಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರಲ್ಲೂ ಆರ್‌.ಟಿ.ನಗರ ರಿಂಗ್‌ ರಸ್ತೆ ಜಂಕ್ಷನ್‌ನಲ್ಲಿ ಪದೇ ಪದೇ ಅಪಘಾತಗಳಾಗುತ್ತಿವೆ. ಇಂದು ಕೂಡಾ ಎರಡು ಇನ್ನೋವಾ ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಎರಡೂ ಕಾರುಗಳು ಜಖಂಗೊಂಡಿದ್ದು. ಕಾರುಗಳಲ್ಲಿದ್ದವರಿಗೆ ಗಾಯಗಳಾಗಿವೆ.

ಆರ್‌.ಆರ್‌.ನಗರದ ರಿಂಗ್‌ ರಸ್ತೆ ಜಂಕ್ಷನ್‌ ಅಪಘಾತಗಳ ಹಾಟ್‌ ಸ್ಪಾಟ್‌ ಆಗಿದೆ. ತಿಂಗಳಲ್ಲಿ ಎರಡು ಮೂರು ಅಪಘಾತಗಳು ಇಲ್ಲಿ ಸಂಭವಿಸುತ್ತಲೇ ಇವೆ. ಹೀಗಾಗಿ ಇಲ್ಲಿ ಸಂಚಾರಿ ದೀಪ ಹಾಗೂ ಪೊಲೀಸರ ನಿಯೋಜನೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

 

 

Share Post